ದ.ಭಾರತ ಮಹಿಳೆಯರು ಕಪ್ಪಗಿದ್ದರೂ ಸುಂದರಿಯರು: ಯಾದವ್ ಹೇಳಿಕೆಗೆ ಜೆಡಿಯು ಸಮರ್ಥನೆ

ಶರದ್ ಯಾದವ್
ಶರದ್ ಯಾದವ್
Updated on: 

ನವದೆಹಲಿ: ದಕ್ಷಿಣ ಭಾರತದ ಮಹಿಳೆಯರು ಕಪ್ಪಗಿದ್ದರೂ ಸುಂದರಿಯಾಗಿರುತ್ತಾರೆ ಎಂಬ ಜೆಡಿಯು ನಾಯಕ ಶರದ್ ಯಾದವ್ ಅವರ ಹೇಳಿಕೆಯನ್ನು ಜೆಡಿಯು ಶನಿವಾರ ಸಮರ್ಥಿಸಿಕೊಂಡಿದೆ.

ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಯು ನಾಯಕ ಕೆಸಿ ತ್ಯಾಗಿ ಅವರು, ಅವರು ಬಳಸಿದ ಪದಗಳು ತಪ್ಪಾಗಿರಬಹುದು. ಆದರೆ ಅವರ ಉದ್ದೇಶ ಸ್ಪಷ್ಟವಾಗಿತ್ತು ಎಂದಿದ್ದಾರೆ.

'ಶರದ್ ಯಾದವ್ ಅವರು ಆಯ್ಕೆ ಮಾಡಿಕೊಂಡ ಪದಗಳು ತಪ್ಪಾಗಿರಬಹುದು. ಆದರೆ ಅವರ ಉದ್ದೇಶ ತಪ್ಪಾಗಿರಲಿಲ್ಲ' ಎಂದು ತ್ಯಾಗಿ ಹೇಳಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ವಿಮಾ ಮಸೂದೆ ಕುರಿತು ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ ಶರದ್ ಯಾದವ್, ಮಸೂದೆ ಬಗ್ಗೆ ಹೇಳಿಕೆ ನೀಡುವುದರ ಬದಲು ದಕ್ಷಿಣ ಭಾರತದ ಮಹಿಳೆಯರ ಬಣ್ಣ ಮತ್ತು ದೇಹದ ಬಗ್ಗೆ ವರ್ಣನೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com