

ಇಸ್ಲಾಮಾಬಾದ್: ಮರಣದಂಡನೆಗೆ ಗುರಿಯಾಗಿದ್ದ ಇಬ್ಬರು ಖೈದಿಗಳನ್ನು ಪಾಕಿಸ್ತಾನ ಸರ್ಕಾರ ಶುಕ್ರವಾರ ಗಲ್ಲಿಗೇರಿಸಿದೆ.
ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ ಅಖ್ತರ್ ಹಾಗೂ ಸಾಜಿದ್ ಎಂಬುವವರನ್ನು ಗಲ್ಲಿಗೇರಿಸಲಾಗಿದೆ.
ಈ ಇಬ್ಬರು ಅಪರಾಧಿಗಳು ಕೊಲೆ ಪ್ರಕರಣಗಳಲ್ಲಿ 2001ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು. ಈ ಮೂಲಕ ಪಾಕಿಸ್ತಾನ ಸರ್ಕಾರ ಇದುವರೆಗೆ ಒಟ್ಟು 27 ಜನರನ್ನು ಗಲ್ಲಿಗೇರಿಸಿದೆ.