

ಜೋಹಾನ್ಸ್‍ಬರ್ಗ್: ಲೇಖಕ ಸಲ್ಮಾನ್ ರಶ್ದಿಯನ್ನು ಹೊಗಳಿದ್ದಕ್ಕೆ ಭಾರತೀಯ ಮೂಲದ ಲೇಖಕಿ ಜೈನುಬ್ ಪ್ರಿಯಾ ದಾಲಾ ಮೇಲೆ ಹಲ್ಲೆ ನಡೆಸಲಾಗಿದೆ.
ಡರ್ಬನ್‍ನ ಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ತಮ್ಮ ಕಾದಂಬರಿ ವಾಟ್ ಎಬೌಟ್ ಮೀರಾ ಕೃತಿಯನ್ನು ಬಿಡುಗಡೆ ಮಾಡಲು ಹೋಗಿದ್ದಾಗ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ರಶ್ದಿ ಬಗ್ಗೆ ಜೈನುಬ್ ಮೆಚ್ಚುಗೆಯ ಮಾತನಾಡಿದ್ದರಿಂದ ಹಲವು ಮಂದಿ ಚಾಕುವಿನಿಂದ ಇರಿದದ್ದು ಮಾತ್ರವಲ್ಲದೆ, ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಮೂಲದ ಲೇಖಕರು ಹಾಗೂ ರಶ್ದಿ ಖಂಡಿಸಿದ್ದಾರೆ. ಆದರೆ ಹಲ್ಲೆ ನಡೆಸಿದ್ದನ್ನು ಮೂಲಭೂತವಾದಿಗಳು ಸಮರ್ಥಿಸಿಕೊಂಡಿದ್ದಾರೆ.