

ಲಕ್ನೋ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ. ಹೀಗೊಂದು ಪೋಸ್ಟರ್ ಅಮೇಥಿಯಲ್ಲಿ ಕಾಣಿಸಿಕೊಂಡಿದೆ. ಕಾಣೆಯಾಗಿರುವ ಅಮೇಥಿ ಸಂಸದನನ್ನು ಹುಡುಕಿಕೊಟ್ಟರೆ ಅಂಥವರಿಗೆ ಬಹುಮಾನವನ್ನು ನೀಡಲಾಗುವುದು ಎಂದೂ ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಸದ್ಯ ಸಕ್ರಿಯ ರಾಜಕಾರಣದಿಂದ ಬ್ರೇಕ್ ತೆಗೆದುಕೊಂಡಿರುವ ರಾಹುಲ್ ಗಾಂಧಿ ಕಳೆದ ಒಂದು ತಿಂಗಳಿನಿಂದ ಅಜ್ಞಾತವಾಸದಲ್ಲಿದ್ದಾರೆ.
ಸಂಸತ್‌ನಲ್ಲಿ ಬಜೆಟ್ ಅಧಿವೇಶನದ ವೇಳೆ ರಾಹುಲ್ ಗಾಂಧಿ ರಜಾ ತೆಗೆದುಕೊಂಡಿದ್ದರು. ಜಾನೆ ವೋ ಕೌನ್ ಸಾ ದೇಶ್ ಜಹಾ ತುಮ್ ಚಲೇ ಗಯೇ, ನಾ ಚಿಟ್ಟಿ ನಾ ಸಂದೇಶ್, ಕಹಾ ತುಮ್ ಚಲೇ ಗಯೇ (ನೀನು ಅದ್ಯಾವ ದೇಶಕ್ಕೆ ಹೋಗಿದ್ದಿ?ಪತ್ರವೂ ಇಲ್ಲ, ಸಂದೇಶವೂ ಇಲ್ಲ..ಅದೆಲ್ಲಿಗೆ ಹೋದೆ? ) ಎಂದು ಬರೆದು ಕೆಳಗೆ ಅಮೇಥಿ ಲೋಕಸಭಾ ಕ್ಷೇತ್ರದ ಜನರು ಎಂದು ನಮೂದಿಸಲಾಗಿದೆ.
ಇಲ್ಲಿನ ಬುಲಂದ್‌ಶಹರ್, ಅಲ್ಲಹಾಬಾದ್ ನಲ್ಲಿಯೂ ರಾಹುಸ್ ಕಾಣೆಯಾಗಿದ್ದಾರೆ, ಪತ್ತೆ ಹಚ್ಚಿದವರಿಗೆ ಬಹುಮಾನ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.