ಮದ್ಯಪಾನ ಮೂಲಭೂತ ಹಕ್ಕಲ್ಲ: ಕೇರಳ ಹೈಕೋರ್ಟ್‌ ತೀರ್ಪು

ಮದ್ಯಪಾನ ಅಥವಾ ಮದ್ಯ ಸೇವನೆ ನಾಗರಿಕರ ಮೂಲಭೂತ ಹಕ್ಕಲ್ಲ. ಮದ್ಯ ಮಾರಾಟವನ್ನು ನಿಯಂತ್ರಿಸುವ ಹಕ್ಕು ಸರ್ಕಾರಕ್ಕಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ...
ಕೇರಳದಲ್ಲಿ ಮದ್ಯ ಮಾರಾಟ ನಿಷೇಧ
ಕೇರಳದಲ್ಲಿ ಮದ್ಯ ಮಾರಾಟ ನಿಷೇಧ

ತಿರುವನಂತಪುರ: ಮದ್ಯಪಾನ ಅಥವಾ ಮದ್ಯ ಸೇವನೆ ನಾಗರಿಕರ ಮೂಲಭೂತ ಹಕ್ಕಲ್ಲ. ಮದ್ಯ ಮಾರಾಟವನ್ನು ನಿಯಂತ್ರಿಸುವ ಹಕ್ಕು ಸರ್ಕಾರಕ್ಕಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಕೇರಳ ಸರ್ಕಾರ ಮದ್ಯಮಾರಾಟದ ಮೇಲೆ ಹೇರಿರುವ ನಿಷೇಧವನ್ನು ಪ್ರಶ್ನಿಸಿ ಮದ್ಯ ಮಾರಾಟಗಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ,  ಮದ್ಯ ಮಾರಾಟ ನಿಯಂತ್ರಣದಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುವುದೆಂಬ ಚಿಂತೆ ಬಾರ್‌ಗಳಿಗೆ ಬೇಡ. ಮದ್ಯ ಮಾರಾಟವನ್ನು ನಿಯಂತ್ರಿಸುವ ಹಕ್ಕು ಸರ್ಕಾರಕ್ಕಿದ್ದು, ಮದ್ಯಪಾನವೇನೂ ನಾಗರಿಕರ ಮೂಲಭೂತ ಹಕ್ಕಲ್ಲ ಎಂದು ಕೇರಳ ಹೈಕೋರ್ಟ್ ನ ನ್ಯಾಯಮೂರ್ತಿ ಕೆ ಟಿ ಶಂಕರನ್‌ ಮತ್ತು ಜಸ್ಟಿಸ್‌ ಮ್ಯಾಥ್ಯೂ ಪಿ ಥೋಮಸ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಮದ್ಯ ಮಾರಾಟಕ್ಕೆ ಸಂಬಂಧಿಸಿದ ಸರ್ಕಾರದ ನಿರ್ಧಾರ ನೀತಿ-ನಿರ್ಧಾರಗಳಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದಿರುವ ಕೇರಳ ಹೈಕೋರ್ಟ್‌, ಮದ್ಯ ಮಾರಾಟ ನಿರ್ಬಂಧದಿಂದ ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟಾಗುವುದೆಂಬ ಪ್ರತಿವಾದಿಗಳ ವಾದವನ್ನು ತಿರಸ್ಕರಿಸಿದೆ. ಮಾತ್ರವಲ್ಲದೆ ಬಾರ್‌ಗಳ ನಿಷೇಧದಿಂದ ನಿರುದ್ಯೋಗ ಸೃಷ್ಟಿಯಾಗುವುದೆಂಬ ವಾದವನ್ನು ಕೂಡ ನ್ಯಾಯಾಲಯ ತಿರಸ್ಕರಿಸಿದೆ. ಸರ್ಕಾರದ ಮದ್ಯಮಾರಾಟ ನೀತಿಯನ್ನು ಎತ್ತಿ ಹಿಡಿದಿರುವ ಕೇರಳ ಹೈಕೋರ್ಟ್‌ ನ ಈ ಮಹತ್ವದ ತೀರ್ಪಿನಿಂದಾಗಿ ಕೇರಳದಲ್ಲಿ ಎಲ್ಲ ಬಾರ್‌ಗಳು ಮುಚ್ಚಲ್ಪಡಲಿದ್ದು, ಕೇರಳದಲ್ಲಿನ ಸುಮಾರು 300 ಲಿಕ್ಕರ್‌ ಬಾರ್‌ಗಳು ಮಂಗಳವಾರ ಮಧ್ಯ ರಾತ್ರಿಯಿಂದಲೇ ಬಾಗಿಲು ಹಾಕಿವೆ. ಪಂಚ ತಾರಾ ಬಾರ್‌ಗಳಲ್ಲಿ ಮಾತ್ರವೇ ಮದ್ಯಮಾರಾಟ ಮಾಡಬಹುದಾಗಿದೆ.

ಸುಪ್ರೀಂ ಮೆಟ್ಟಿಲೇರುತ್ತೇವೆ: ಬಾರ್ ಮಾಲೀಕರು
ಇದೇ ವೇಳೆ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮದ್ಯಮಾರಾಟಗಾರರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com