ಯಾರ ನಿರ್ಧಾರ ಅಂತಿಮ? ಕೇಜ್ರಿವಾಲ್, ಜಂಗ್ ಫೈಟ್

: ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಒಂದಲ್ಲ ಒಂದು ತೊಂದರೆಗಳು ಕಾಡುತ್ತಲೇ ಇವೆ. ಪಕ್ಷದಲ್ಲಿರುವ ಭಿನ್ನಮತವನ್ನು 'ಸಂಪೂರ್ಣ ನಿಯಂತ್ರಣ' ಮಾಡಿದ ಬೆನ್ನಲ್ಲೇ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವೆ ಸಮರ...
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Updated on: 

ನವದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಒಂದಲ್ಲ ಒಂದು ತೊಂದರೆಗಳು ಕಾಡುತ್ತಲೇ ಇವೆ. ಪಕ್ಷದಲ್ಲಿರುವ ಭಿನ್ನಮತವನ್ನು 'ಸಂಪೂರ್ಣ ನಿಯಂತ್ರಣ' ಮಾಡಿದ ಬೆನ್ನಲ್ಲೇ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವೆ ಸಮರ ಶುರುವಾಗಿದೆ.

ದೆಹಲಿ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ಕಡತಗಳನ್ನು ತಮಗೆ ಕಳುಹಿಸಬೇಕು. ಸಂವಿಧಾನ ಬದ್ಧವಾಗಿ ಇದು ಸರಿಯಾದ ಕ್ರಮ ಎಂದು ಹೊಸ ಯುದ್ಧದ ಆರಂಭಕ್ಕೆ ಮುನ್ನುಡಿ ಬರೆದಿದೆ.

ಮುಖ್ಯಮಂತ್ರಿ ಮತ್ತು ಮತ್ತು ಸಂಪುಟ ಸದಸ್ಯರು ಕೆಲವೊಂದು ವಿಚಾರಗಳಲ್ಲಿ ಲೆ.ಗ. ಅವರಿಗೆ ಸಲಹೆ ಸೂಚನೆ ನೀಡಬೇಕು. ಈ ಬಗ್ಗೆ ದೆಹಲಿ ರಾಜ್ಯ ಸರ್ಕಾರ ರಚನೆ ಕಾಯ್ದೆ 1991 ಮತ್ತು ಕಲಾಪ ನಿರ್ವಹಣಾ ನಿಯಮ (ಟ್ರಾನ್ಸಾಕ್ಷನ್ ಆಫ್ ಬ್ಯುಸಿನೆಸ್ ರೂಲ್ಸ್ 1993) ಪ್ರಕಾರ ಪ್ರಮುಖ ನಿರ್ಧಾರಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ನಿರ್ಧಾರವೇ ಅಂತಿಮ ಎಂದು ಸೂಚನೆ ಹೊರಡಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಸೂಚನೆಯಿಂದ ಕ್ರುದ್ಧರಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಕೂಡ ಯಾವುದೇ ಕಡತಗಳನ್ನು ಜಂಗ್ ಗೆ ಕಳುಹಿಸಲೇಬಾರದು ಎಂದು ಪ್ರತ್ಯಾದೇಶ ಹೊರರಡಿಸಿದ್ದಾರೆ.

49 ದಿನಗಳ ಕಾಲ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದ ವೇಲೆ ಕೂಡ ಅರವಿಂದ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಜತೆ ಸಂಘರ್ಷಕ್ಕೆ ಇಳಿದಿದ್ದರು. ಜನಲೋಕಪಾಲ ಮಸೂದೆ ಮಂಡನೆ ನಿಟ್ಟಿನಲ್ಲಿ ಜಂಗ್ ರ ಅನುಮತಿ ಇಲ್ಲದೆ ದೆಹಲಿ ವಿಧಾನ ಸಭೆಯಲ್ಲಿ ಮಂಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com