ನ್ಯೂಜಿಲೆಂಡ್ ನಲ್ಲಿ ಪ್ರಬಲ ಭೂಕಂಪನ

ಪ್ರವಾಸಿಗರ ನಾಡು ನ್ಯೂಜಿಲೆಂಡ್ ನಲ್ಲಿ ಸೋಮವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ.
ನ್ಯೂಜಿಲೆಂಡ್ ನ ವನಕ ಪ್ರದೇಶ
ನ್ಯೂಜಿಲೆಂಡ್ ನ ವನಕ ಪ್ರದೇಶ
Updated on: 

ವೆಲ್ಲಿಂಗ್ಟನ್: ಪ್ರವಾಸಿಗರ ನಾಡು ನ್ಯೂಜಿಲೆಂಡ್ ನಲ್ಲಿ ಸೋಮವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ.

ದ್ವೀಪರಾಷ್ಟ್ರ ನ್ಯೂಜಿಲೆಂಡ್ ನ ಭೂಕಂಪ ನಿಗಾ ಸಂಸ್ಥೆ ಜಿಯೊನೆಟ್ ವರದಿಯ ಪ್ರಕಾರ ವನಕ ಪಟ್ಟಣದ ವಾಯವ್ಯದ 30 ಕಿ.ಮೀ. ದೂರದಲ್ಲಿ ಭೂಕಂಪನ ಕೇಂದ್ರಬಿಂದು ದಾಖಲಾಗಿದೆ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ. ತೀವ್ರ ಸ್ವರೂಪದ ಭೂಕಂಪನ ಇದಾಗಿದ್ದು, ಸಾವು-ನೋವಿನ ಕುರಿತು ವರದಿಯಾಗಿಲ್ಲ. ಆದರೆ ಉತ್ತರ ದ್ವೀಪದ ದಕ್ಷಿಣದಲ್ಲಿರುವ ನ್ಯೂಜಿಲೆಂಡ್ ರಾಜಧಾನಿ ವೆಲ್ಲಿಂಗ್ಟನ್​ನಲ್ಲೂ ಭೂಕಂಪನದ ಪರಿಣಾಮ ಭೂಮಿ ನಡುಗಿದ ಅನುಭವವಾಗಿದೆ ಎಂದು ತಿಳಿದುಬಂದಿದೆ.

ರಾತ್ರಿ ಸುಮಾರು 2.29ರ ಸಮಯದಲ್ಲಿ ಸುಮಾರು 5 ಸೆಕೆಂಡುಗಳ ಕಾಲ ಭೂಮಿ ನಡುಗಿದ್ದು, ಇದಾದ ಬಳಿಕ ಇದೇ ವನಕ ಪ್ರದೇಶದಲ್ಲಿ ಸುಮಾರು 10 ನಿಮಿಷಗಳ ಕಾಲ ಕಡಿಮೆ ಅಂದರೆ 3.4 ತೀವ್ರತೆಯ ಸರಣಿ ಭೂಕಂಪನಗಳು ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com