
ಟೆಹರಾನ್: ಅಮೆರಿಕದ ಪ್ರಬಲ ಆಕ್ಷೇಪದ ಹೊರತಾಗಿಯೂ ಇರಾನ್‍ನ ಚಹಬಹಾರ್ ನಲ್ಲಿ ಬಂದರು ನಿರ್ಮಿಸಲು ಭಾರತ ಒಪ್ಪಂದಕ್ಕೆ ಸಹಿ ಹಾಕಿದೆ.
ಇದರ ಮೂಲಕ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮೂಲಕ ಭಾರತಕ್ಕೆ ಸಮುದ್ರ ಮತ್ತು ನೆಲದ ಮೂಲಕ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಇರಾನ್‍ನ ಸಾರಿಗೆ ಮತ್ತು ನಗರಾಭಿವೃದ್ಧಿ ಸಚಿವ ಡಾ.ಅಬ್ಬಾಸ್ ಅಹ್ಮದ್ ಧವಾರ್ ಮುದ್ರೆಯೊತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಜತೆ ಚೀನಾದ ವಾಯವ್ಯ ಭಾಗದ ಕ್ಸಿನ್ ಜಿಯಾಂಗ್‍ನಿಂದ ಬಲೂಚಿಸ್ತಾನದ ಗ್ವದಾರ್ ಬಂದರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಬಹುಕೋಟಿ ವೆಚ್ಚದ ಆರ್ಥಿಕ ಕಾರಿಡಾರ್ ಯೋಜನೆಗೆ ಸಹಿ ಹಾಕಿದ್ದರು. ಈ ಯೋಜನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲೇ ಹಾದು ಹೋಗುತ್ತದೆ. ಹೀಗಾಗಿ, ಈ ಒಪ್ಪಂದ ಮುಂದಿನ ವರ್ಷಗಳಲ್ಲಿ ದೇಶಕ್ಕೆ ಭದ್ರತೆಯ ವಿಚಾರದಲ್ಲಿ ಅಪಾಯ ತಂದೊಡ್ಡಲಿದೆ. ಹೀಗಾಗಿ, ಗ್ವದಾರ್‍ನಿಂದ 75 ಕಿಮೀ ದೂರದಲ್ಲಿರುವ ಚಹಬಹಾರ್‍ನಲ್ಲಿ ಬಂದರು ನಿರ್ಮಾಣಕ್ಕೆ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿತ್ತು ಕೇಂದ್ರ ಸರ್ಕಾರ.
ಅಮೆರಿಕದ ಆಕ್ಷೇಪ ಏಕೆ?:
ಇರಾನ್ ಸರ್ಕಾರ ಅಕ್ರಮವಾಗಿ ಪರಮಾಣು ಕಾರ್ಯಕ್ರಮ ಕೈಗೊಳ್ಳುತ್ತಿದೆ ಎನ್ನುತ್ತಿದೆ. ಅದಕ್ಕಾಗಿ ಇತ್ತೀಚೆಗಷ್ಟೇ ಪರಮಾಣು ಡೀಲ್ ಅನ್ನು ಮಾಡಿಕೊಂಡಿತ್ತು. ಅದು ಪೂರ್ತಿಯಾಗುವ ಮುನ್ನವೇ ಕೇಂದ್ರ ಸರ್ಕಾರ ಆತುರವಾಗಿ ಒಪ್ಪಂದ ಮಾಡಿಕೊಂಡಿದೆ ಎನ್ನುವುದು ಒಬಾಮ ಆಡಳಿತದ ವಾದ. ಪಾಕಿಸ್ತಾನ ಆಕ್ಷೇಪ: ಪಾಕಿಸ್ತಾನದ ಕರಾಚಿ ಮೂಲಕವೇ ಜಲ ಮತ್ತು ನೆಲದ ಮೂಲಕ ಈ ಯೋಜನೆ ಸಾಗಲಿದೆ. ಆದರೆ ಯೋಜನೆಯನ್ನು ತನ್ನ ನೆಲದ ಮೂಲಕ ಸಾಗಲು ಬಿಡುವುದಿಲ್ಲ ಎಂದು ಗುಟುರು ಹಾಕಿತ್ತು.
ಬಂದರಿನ ಉದ್ದೇಶ?
ಚಹಬಹಾರ್‍ನಲ್ಲಿ ರು.542.60 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲಾಗುತ್ತದೆ. 10 ವರ್ಷಗಳ ಕಾಲ 2 ಬರ್ತ್ ಗಳನ್ನು ನಿರ್ವಹಿಸಲಿದೆ ಕೇಂದ್ರ ಸರ್ಕಾರ.
ಅಫ್ಘಾನಿಸ್ತಾನ, ಪಾಕಿಸ್ತಾನ ಮೂಲಕ ಇರಾನ್‍ಗೆ ನೇರವಾಗಿ ಭಾರತಕ್ಕೆ ಸಂಪರ್ಕ ಕಲ್ಪಿಸಲು ಅನುಕೂಲವಾಗುತ್ತದೆ. ಜತೆಗೆ ಆ ರಾಷ್ಟ್ರದಿಂದ ನೇರವಾಗಿ ಕಚ್ಚಾ ತೈಲ ಆಮದು ಮಾಡಿಕೊಳ್ಳಲೂ ನೆರವಾಗುತ್ತದೆ.
ಪಾಕಿಸ್ತಾನದ ಗ್ವದಾರ್ ಬಂದರಿನಲ್ಲಿ ಚೀನಾ ತನ್ನ ಪ್ರಾಬಲ್ಯ ಸಾ„ಸುವ ಜತೆಗೆ ಭಾರತ ಕೂಡ
ಅಫ್ಘಾನಿಸ್ತಾನದಲ್ಲಿ ತನ್ನ ಹಿಡಿತ ಸಾಧಿಸಲೂ ಈ ಬಂದರು ರಾಜತಾಂತ್ರಿಕವಾಗಿ ಪ್ರಾಮುಖ್ಯತೆ ಪಡೆಯಲಿದೆ.
ಇದರಿಂದಾಗಿ ಅಫ್ಘಾನಿಸ್ತಾನಕ್ಕೆ ಕೂಡ ವಾಣಿಜ್ಯಿಕವಾಗಿ ಹೆಚ್ಚಿನ ಲಾಭವಾಗಲಿದೆ.
Advertisement