ರಾಹುಲ್ ಕಠಿಣ ಶ್ರಮದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ: ಎನ್ ಸಿಪಿ

ರಾಹುಲ್ ಗಾಂಧಿಯ ಪಂಜಾಬ್ ಹಾಗೂ ತೆಲಂಗಾಣ ಭೇಟಿಗಳು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಬಲನೀಡಲಿದ್ದು, ರಾಹುಲ್ ಪರಿಶ್ರಮದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗುರುವಾರ ಹೇಳಿದೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on

ನವದೆಹಲಿ: ರಾಹುಲ್ ಗಾಂಧಿಯ ಪಂಜಾಬ್ ಹಾಗೂ ತೆಲಂಗಾಣ ಭೇಟಿಗಳು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಬಲನೀಡಲಿದ್ದು, ರಾಹುಲ್ ಪರಿಶ್ರಮದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು  ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗುರುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ತರಿಕ್ ಅನ್ವರ್, ರಾಹುಲ್ ಗಾಂಧಿ ಇದೇ ರೀತಿ ಕಠಿಣ ಶ್ರಮ ಪಟ್ಟರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ನನಗೆ ನಂಬಿಕೆಯಿಂದೆ. ರಾಹುಲ್ ಅವರ ಪ್ರಯತ್ನದಲ್ಲಿ ಯಾವುದೇ ತಪ್ಪಿಲ್ಲ. ರಾಹುಲ್ ಪಾದಯಾತ್ರೆ, ತೆಲಂಗಾಣ ಭೇಟಿಗಳು ಕಾಂಗ್ರೆಸ್ ಪಕ್ಷಕ್ಕೆ ಲಾಭ ನೀಡಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ ದೇಶದ ನಾನಾ ಕಡೆಗಳಲ್ಲಿ ಅಕಾಲಿಕ ಮಳೆ ಉಂಟು ಮಾಡಿದ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತ್ರಸ್ಥರಿಗೆ ಸಾಂತ್ವನ ಹೇಳುವ ಸಲುವಾಗಿ ರಾಹುಲ್ ಪಂಜಾಬ್ ನಾದ್ಯಂತ ಪಾದಯಾತ್ರೆ ಕೈ ಗೊಂಡಿದ್ದರು. ಇದೀಗ ರಾಹುಲ್ ತೆಲಂಗಾಣಕ್ಕೆ ಭೇಟಿ ನೀಡಿಲಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com