

ನವದೆಹಲಿ: ದೆಹಲಿ ಸರ್ಕಾರದ ಘನತೆಗೆ ಹಾನಿಯಾಗುವಂಥ ಸುದ್ದಿಗಳು ಪ್ರಸಾರವಾದರೇ ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಭಾರಿ ಹಿನ್ನಡೆಯಾಗಿದೆ.
ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ದೆಹಲಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರಿಂಕೋರ್ಟ್ ತಡೆ ನೀಡಿದೆ.
ದೆಹಲಿಯ ಆಪ್ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಂಪುಟ ಸಭೆಯ ಸಚಿವರ ಘನತೆ, ಗೌರವ ಹಾಗೂ ಮಾನಹಾನಿಯಾಗುವಂತ ಯಾವುದೇ ಸುದ್ದಿ ಪ್ರಸಾರ ಮಾಡಿದ್ರೆ ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.
ಮಾಧ್ಯಮಗಳಲ್ಲಿ ಪ್ರಸಾರವಾಗುವ ಯಾವುದೇ ಸುದ್ದಿಗಳಲ್ಲಿ ಸರ್ಕಾರದ ಘನತಕ್ಕೆ ಧಕ್ಕೆಯಾದರ ಅಂಥವರ ವಿರುದ್ಧ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಕೇಸು ದಾಖಲಿಸಬಹುದು ದೆಹಲಿಯ ಮಾಹಿತಿ ಮತ್ತು ಪ್ರಸಾರ ವಿಭಾಗ ಸುತ್ತೋಲೆ ಹೊರಡಿಸಿತ್ತು. ಈ ಅಧಿಸೂಚನೆ ಜಾರಿಗೆ ತರದಂತೆ ಸುಪ್ರಿಂ ಕೋರ್ಟ್ ತಡೆ ನೀಡಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ದೆಹಲಿಯ ಆಮ್ ಆದ್ಮಿ ಸರ್ಕಾರ ಪ್ರಜಾಪುಭುತ್ವ ವಿರೋಧಿ, ಮತ್ತು ಮೋಸಗಾರ ಎಂದೆಲ್ಲಾ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ಕೇಜ್ರಿವಾಲ್ ತೀವ್ರ ಮುಜುಗರ ಅನುಭವಿಸಿದ್ದರು.