

ಚೆನ್ನೈ: ಅಕ್ರಮ ಆಸ್ತಿ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರು ಜೈಲು ಸೇರಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆನ್ನಲಾದ 244 ಮಂದಿಗೆ ತಮಿಳುನಾಡು ಸರ್ಕಾರ ಪರಿಹಾರ ನೀಡಲು ನಿರ್ಧರಿಸಿದೆ.
ಈ ಬಗ್ಗೆ ಶನಿವಾರ ಮಾಹಿತಿ ನೀಡಿರುವ ಎಐಎಡಿಎಂಕೆ ಪಕ್ಷ, ಮೃತರ ಕುಟುಂಬಕ್ಕೆ ತಲಾ ರು.3 ಲಕ್ಷ ಪರಿಹಾರ ನೀಡುವಂತೆ ಜಯಾ ಸೂಚಿಸಿದ್ದಾರೆ ಎಂದಿದೆ. ಜತೆಗೆ, ಈವರೆಗೆ ಇದಕ್ಕಾಗಿ ರು.7.32 ಕೋಟಿ ವಿನಿಯೋಗಿಸಲಾಗಿದೆ ಎಂದೂ ಹೇಳಿದೆ.