ಚುಡಾಯಿಸಿದವನಿಗೆ ಸಾರ್ವಜನಿಕವಾಗಿ ಬುದ್ದಿ ಕಲಿಸಿದ ಯುವತಿ!

ಕಣ್ಣು ಹೊಡೆದು ಚುಡಾಯಿಸಿದ ವ್ಯಕ್ತಿಯ ವಿರುದ್ಧ ಯುವತಿಯೊಬ್ಬಳು ಸಾರ್ವಜನಿಕವಾಗಿಯೇ ಹರಿಹಾಯ್ದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಣದಲ್ಲಿ ಹರಿದಾಡುತ್ತಿದ್ದು, ಸಂಘರ್ಷಕ್ಕಿಳಿದಿದ್ದ ಯುವತಿ ಇದೀಗ ಸಮಾಜಿಕ ಜಾಲತಾಣದ ಸ್ಟಾರ್ ಆಗಿಖ್ಯಾತಿ ಗಳಿಸುತ್ತಿದ್ದಾಳೆ...
ಕಣ್ಣು ಹೊಡೆದು ಚುಡಾಯಿಸಿದವನಿಗೆ ಸಾರ್ವಜನಿಕವಾಗಿ ಬುದ್ದಿ ಹೇಳಿದ ಯುವತಿ ಸಾಧ್ವಿ ಪಾಂಡೆ ಚಿತ್ರ
ಕಣ್ಣು ಹೊಡೆದು ಚುಡಾಯಿಸಿದವನಿಗೆ ಸಾರ್ವಜನಿಕವಾಗಿ ಬುದ್ದಿ ಹೇಳಿದ ಯುವತಿ ಸಾಧ್ವಿ ಪಾಂಡೆ ಚಿತ್ರ
Updated on: 

ಆಗ್ರಾ: ಕಣ್ಣು ಹೊಡೆದು ಚುಡಾಯಿಸಿದ ವ್ಯಕ್ತಿಯ ವಿರುದ್ಧ ಯುವತಿಯೊಬ್ಬಳು ಸಾರ್ವಜನಿಕವಾಗಿಯೇ ಹರಿಹಾಯ್ದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಣದಲ್ಲಿ ಹರಿದಾಡುತ್ತಿದ್ದು, ಸಂಘರ್ಷಕ್ಕಿಳಿದಿದ್ದ ಯುವತಿ ಇದೀಗ ಸಮಾಜಿಕ ಜಾಲತಾಣದ ಸ್ಟಾರ್ ಆಗಿಖ್ಯಾತಿ ಗಳಿಸುತ್ತಿದ್ದಾಳೆ.

ಸಾಧ್ವಿ ಪಾಂಡೆ (23) ಯುವತಿ ಆಕೆಯ ಸಹೋದರಿಯೊಂದಿಗೆ ಸ್ಕೂಟರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಳು. ಈ ವೇಳೆ ರಸ್ತೆಯಲ್ಲಿ ಸಿಗ್ನಲ್ ಬಿದ್ದ ಕಾರಣ ವಾಹನವನ್ನು ನಿಲ್ಲಿಸಿದ್ದಾರೆ. ಅದೇ ಹೊತ್ತಿಗೆ ತಮ್ಮ ಅಂಗರಕ್ಷಕ ಗನ್ ಮ್ಯಾನ್ ಗಳ ಜತೆಗೆ ಕಾರಿನಲ್ಲಿ ಬಂದ ಸಮಾಜವಾದಿ ಪಕ್ಷದ ಶಾಸಕ ಅಭಿನವ ಶರ್ಮಾ ಅವರು ನಿಲ್ಲಿಸಿದ್ದಾರೆ. ಈ ವೇಳೆ ಸಾಧ್ವಿ ಪಾಂಡೆಯನ್ನು ಕಂಡ ಗನ್ ಮ್ಯಾನ್ ಒಬ್ಬನು ಸಾಧ್ವಿ ಪಾಂಡೆಗೆ ಕಣ್ಣು ಹೊಡೆದಿದ್ದಾನೆ.

ಇದನ್ನು ಕಂಡ ಸಾಧ್ವಿ ಪಾಂಡೆಗೆ ಕೋಪ ನೆತ್ತಿಗೇರಿದೆ. ನಂತರ ಸಿಟ್ಟಿಗೆದ್ದ ಆಕೆ ಇದ್ದಕ್ಕಿದ್ದಂತೆ ಸ್ಕೂಟಿಯನ್ನು ಅಲ್ಲೇ ನಿಲ್ಲಿಸಿ ಅಭಿನವ ಶರ್ಮಾ ಅವರ ಕಾರಿನ ಬಾನೆಟ್ ಏರಿದ್ದಾಳೆ. ನಿಂತರ ಸಮಾಜವಾದಿ ಪಕ್ಷದ ಧ್ವಜವನ್ನು ಕಿತ್ತುಹಾಕಿ, ಕಾರಿನ ವಿಂಡ್ ಶೀಲ್ಡ್  ಹೊಡೆಯಲು ಮುಂದಾಗಿದ್ದಾಳೆ. ಈ ವೇಳೆ ಅಭಿನವ ಶರ್ಮಾ ಅವದ ಹಿಂಭಾಗದಲ್ಲಿದ್ದ ಬೆಂಬಲಿಗರು ಕಾರಿನಿಂದ ಹೊರ ಬಂದು ಸಾಧ್ವಿಯನ್ನು ಕೆಳಗಿಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಆ ವೇಳೆಗಾಗಲೇ ಸ್ಥಳದಲ್ಲಿದ್ದ ಜನರನ್ನು ಕಂಡು ಹೆದರಿದ್ದ ಹಿಂಬಾಲಕರು ತಮ್ಮ ಶಕ್ತಿ ಪ್ರದರ್ಶನ ಮಾಡುವುದನ್ನು ನಿಲ್ಲಿಸಿದ್ದಾರೆ.

ನಂತರ ಸ್ಥಳಕ್ಕಾಗಿಮಿಸದ ಪೊಲೀಸರು ಕಾರಿನ ಮೇಲೆ ಹತ್ತಿದ್ದ ಸಾಧ್ವಿ ಪಾಂಡೆಯನ್ನು ಸಮಾಧಾನಪಡಿಸಿ ಕೆಳಗಿಳಿಸಿದ್ದಾರೆ. ನಂತರ ಸಾಧ್ವಿ ಪಾಂಡೆ ಚುಡಾಯಿಸಿದ ವ್ಯಕ್ತಿ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕಾರಿನ ಮೇಲೆ ಹತ್ತಿದ್ದರಿಂದ ಮೊಬೈಲ್ ಹಾಳಾಗಿದ್ದು, ಮೊಬೈಲ್ ಪರಿಹಾರ ನೀಡಬೇಕೆಂದು ಹೇಳಿದ್ದಾಳೆ. ಸಾಧ್ವಿ ಪಾಂಡೆಯ ಆಗ್ರಹಕ್ಕೆ ಪ್ರತಿಸ್ಪಂದಿಸಿದ ಅಭಿನವ ಶರ್ಮಾ ಅವರು ಮೊಬೈಲ್ ಪರಿಹಾರವೆಂದು ರು.6, 500ಗಳನ್ನು ನೀಡಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಹುಡುಗಿ ಧೈರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

ಘಟನೆಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಾಧ್ವಿ ಪಾಂಡೆ, ಉತ್ತರ ಪ್ರದೇಶದ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ. ಘಟನೆ ನಡೆಯುವ ವೇಳೆ ಸ್ಥಳಕ್ಕಾಗಿಮಿಸಿದ ಪೊಲೀಸರಿಗೆ ಘಟನೆಯ ವಿವರವನ್ನು ಹೇಳಿದ್ದೇನೆ. ಆದರೆ ಇದಕ್ಕೆ ಪೊಲೀಸರು ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಚುಡಾಯಿಸಿದ ವ್ಯಕ್ತಿ ಯಾರೆಂಬುದು ನನಗೆ ಗೊತ್ತಿಲ್ಲ. ಚುಡಾಯಿಸಿದ ವ್ಯಕ್ತಿಗೆ ಪಾಠ ಕಲಿಸಬೇಕೆಂಬುದೊಂದೇ ನನ್ನ ಉದ್ದೇಶವಾಗಿತ್ತು. ಚುಡಾಯಿಸಿದ ವ್ಯಕ್ತಿಯ ತಂದೆ ಬಂದು ಈಗಾಗಲೇ ನನ್ನನ್ನು ಕ್ಷಮಾಪಣೆ ಕೇಳಿದ್ದಾರೆ. ಇನ್ನು ಪ್ರಕರಣವನ್ನು ಮುಂದುವರೆಸುವುದು ನನಗೆ ಇಷ್ಟವಿಲ್ಲ. ಇಲ್ಲಿಗೆ ಈ ಪ್ರಕರಣಕ್ಕೆ ಅಂತ್ಯ ಹೇಳೋಣ ಎಂದು ಹೇಳಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com