ಮೋದಿ ಸರ್ಕಾರಕ್ಕೆ ಒಂದು ವರ್ಷ: ಯಶೋಗಾಥೆಗಳ ರಿಪೋರ್ಟ್ ಕಾರ್ಡ್ ತಯಾರಿ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಇದೇ ಮೇ26ಕ್ಕೆ ಒಂದು ವರ್ಷ ತುಂಬಲಿದ್ದು, ತನ್ನ ಒಂದು ವರ್ಷದ ಅವಧಿಯ ಸಾಧನೆಯ ಬಗ್ಗೆ ಕೇಂದ್ರ ಸರ್ಕಾರ ವರದಿ ತಯಾರಿಸಿದೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಇದೇ ಮೇ26ಕ್ಕೆ ಒಂದು ವರ್ಷ ತುಂಬಲಿದ್ದು, ತನ್ನ ಒಂದು ವರ್ಷದ ಅವಧಿಯ ಸಾಧನೆಯ ಬಗ್ಗೆ ಕೇಂದ್ರ ಸರ್ಕಾರ ವರದಿ ತಯಾರಿಸಿದೆ.

ಸುಮಾರು 180 ಪುಟಗಳನ್ನು ಹೊಂದಿರುವ ಈ ಸರ್ಕಾರದ ಸಾಧನೆಯ ವರದಿಯಲ್ಲಿ ಸರ್ಕಾರದ ಸಾಧನೆಗಳಿಗಿಂತಲೂ ಸರ್ಕಾರದ ಯೋಜನೆಗಳ ಫಲಾನುಭವಿಗಳ ಕಥೆಗಳೇ ಹೆಚ್ಚಾಗಿವೆಯಂತೆ.

ಪ್ರಸ್ತುತ ಕೇಂದ್ರ ಸರ್ಕಾರ ಹೊರತರಲು ಉದ್ದೇಶಿಸಿರುವ ಈ ಸರ್ಕಾರದ ಸಾಧನೆಯ ಪುಸ್ತಕ ಸರ್ಕಾರದ ಸಾಧನೆ ಮತ್ತು ಅವುಗಳಿಂದ ಜನತೆ ಹೇಗೆ ಅನುಕೂಲ ಪಡೆದಿದ್ದಾರೆ ಎಂಬುದನ್ನು ಕೇಂದ್ರೀಕರಿಸಿ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈಶಾನ್ಯ ಮತ್ತು ಉತ್ತರ ಭಾರತದ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಸರ್ಕಾರದ ಕೊಡುಗೆಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ಮತ್ತು ಮಧ್ಯಮ ವರ್ಗದ ಜನರು ಹೇಗೆ ಸರ್ಕಾರದ ಯೋಜನೆಗಳ ಅನುಕೂಲ ಪಡೆದಿದ್ದಾರೆ ಎಂಬುದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಇತ್ತೀಚೆಗೆ ನೆರೆಯ ನೇಪಾಳ ದೇಶದಲ್ಲಿ ಉಂಟಾದ ಭೀಕರ ಭೂಕಂಪನದಲ್ಲಿ ಭಾರತ ಸರ್ಕಾರ ಕೈಗೊಂಡ ದಿಟ್ಟ ಹೆಜ್ಜೆಗಳ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಾದ ಸ್ವಚ್ಛಭಾರತ ಯೋಜನೆ, ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಯೋಜನೆ ಕುರಿತ ಪ್ರಗತಿ ಪರಿಶೀಲನಾ ವರದಿಯ ಮಾಹಿತಿ ಕೂಡ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪುಸ್ತಕದ ಒಂದು ಪುಟದಲ್ಲಿ ಛತ್ತೀಸ್ ಗಡದ ರಾನುಚರ್ವ ಎಂಬ ಮಹಿಳೆ ಕೇಂದ್ರ ಸರ್ಕಾದ ರಾಷ್ಟ್ರೀಯ ನಗರ ಜೀವನೋಪಾಯಗಳ ಮಿಷನ್ ಯೋಜನೆಯಡಿಯಲ್ಲಿ ತರಬೇತಿ ಪಡೆದು ಪ್ರಸ್ತುತ ಆಟೋ ನಡೆಸಿಕೊಂಡು ಜೀವನ ನಡೆಸುತ್ತಿರುವ ಕಥೆಯನ್ನು ಕೂಡ ನಮೂದಿಸಲಾಗಿದೆ. ರಾನುಚರ್ವ ತನ್ನ ಪ್ರಾಂತ್ಯದ ಮೊದಲ ಮತ್ತು ಏಕೈಕ ಮಹಿಳಾ ಆಟೋ ಡ್ರೈವರ್ ಎಂಬ ಖ್ಯಾತಿಗೂ ಈ ಮಹಿಳೆ ಒಳಗಾಗಿದ್ದಾಳೆ ಎಂದು ಹೇಳಲಾಗಿದೆ.

ಇದಲ್ಲದೆ ಕೇಂದ್ರದ ಎನ್ ಡಿಎ ಸರ್ಕಾರದ ವಿತ್ತೀಯ ಯೋಜನೆಗಳು ಮತ್ತು ಆರ್ಥಿಕ ಕ್ರಮಗಳು ಹೇಗೆ ಭಾರತದ ಬಡಜನರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತಿದೆ ಎಂಬುದನ್ನು ವಿವರವಾದ ಅಂಕಿಅಂಶಗಳೊಂದಿಗೆ ವಿವರಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com