ದೆಹಲಿ ಸಿಎಂ, ಎಲ್ ಜಿ ನಡುವೆ ತಿಕ್ಕಾಟ: ವಿಶೇಷ ಅಧಿವೇಶನ ಕರೆದ ಕೇಜ್ರಿವಾಲ್

ಉನ್ನತ ಅಧಿಕಾರಿಗಳ ನೇಮಕ, ವರ್ಗಾವಣೆಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪರಾಷ್ಟ್ರಪತಿ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 

ನವದೆಹಲಿ: ಉನ್ನತ ಅಧಿಕಾರಿಗಳ ನೇಮಕ, ವರ್ಗಾವಣೆಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪರಾಷ್ಟ್ರಪತಿ ನಜೀಬ್ ಜಂಗ್ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಈ ಸಂಬಂಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆದಿದ್ದಾರೆ.
 
ಹಿರಿಯ ಅಧಿಕಾರಿಗಳ ನೇಮಕ, ವರ್ಗಾವಣೆ ಸಂಬಂಧ ತಿಕ್ಕಾಟದಿಂದ ರೋಸಿ ಹೋಗಿರುವ ಕೇಜ್ರಿವಾಲ್ ಮೇ 26 ಹಾಗೂ 27 ರಂದು ವಿಶೇಷ ಅಧಿವೇಶನವನ್ನು ಕರೆದಿದ್ದಾರೆ. ಈ ಹಿಂದೆ ಜೂನ್ ನಲ್ಲಿ ಅಧಿವೇಶನಕ್ಕೆ ನಿರ್ಧರಿಸಲಾಗಿತ್ತು.

ಉನ್ನತ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಗೆ ಇದೆ ಎಂದು ಗೃಹ ಇಲಾಖೆ ವಿಶೇಷ ಪ್ರಕಟಣೆ ಹೊರಡಿಸಿತ್ತು. ಈ ಎಲ್ಲಾ ಚಟುವಟಿಕೆಯಿಂದಾಗಿ ಕೇಜ್ರಿವಾಲ್ ವಿಶೇಷ ಅಧಿವೇಶವನ್ನು ಕರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com