

ಮುಂಬೈ: ನಗರ ಸೇರಿದಂತೆ ಹಳ್ಳಿಗಳಲ್ಲಿ ಅಲ್ಲಲ್ಲಿ ನೀರಿಗೆ ಬರಗಾಲವಿರುವುದು ಸಾಮಾನ್ಯ. ಆದರೆ 2025ರ ವೇಳೆಗೆ ಒಟ್ಟಾರೆಯಾಗಿ ಭಾರತದಲ್ಲಿ ನೀರಿಗೆ ಬರಗಾಲ ಬರಲಿದಿಯಂತೆ.ನೀರಿಗೆ ಇರುವ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವಾಗುವುದರಿಂದ ನೀರಿಗೆ ತತ್ವಾರ ಬರುತ್ತದೆ ಎಂದು ಜಲ ವಲಯದಲ ಸಲಹಾ ಸಂಸ್ಥೆಯೊಂದು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಗೃಹ ಬಳಕೆಯಲ್ಲಿ, ಸೇವಾ ವಲಯ ಮತ್ತು ಕೈಗಾರಿಕೆಗಳಲ್ಲಿ ನೀರಿನ ಖರ್ಚು ಪ್ರಮಾಣ ಅಧಿಕವಾಗಿರುವುದರಿಂದ, ಅಂತರ್ಜಲದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುವುದರಿಂದ ಆಪತ್ತು ಬರಬಹುದು ಎಂದು ಹೇಳಿದೆ.