

ಗೊಂಡ(ಉ.ಪ್ರದೇಶ): ಮತದಾನಕ್ಕೂ ಮೂರು ದಿನ ಮೊದಲೇ ಮೃತಪಟ್ಟಿದ್ದ ರಂಗಿಲಾಲ್ ಎಂಬ ಅಭ್ಯರ್ಥಿ ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ್ದಾರೆ.
ಧರ್ಮಾಯಿ ಗ್ರಾಮದ ರಂಗಿಲಾಲ್ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಮುಜೆಹ್ನಾ ಪಂಚಾಯತ್ ಕ್ಷೇತ್ರ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಅಕ್ಟೋಬರ್ 13ರ ಮತದಾನಕ್ಕೂ ಮುನ್ನ ವಿಜೇತ ಅಭ್ಯರ್ಥಿ ರಂಗಿಲಾಲ್ ಅವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಚುನಾವಣಾ ಅಧಿಕಾರಿ ಅಜಯ್ ಕುಮಾರ್ ಉಪಾಧ್ಯಾಯ ಅವರು ತಿಳಿಸಿದ್ದಾರೆ.
ಪಂಚಾಯತ್ ಚುನಾವಣೆಯಲ್ಲಿ ಮತದಾನಕ್ಕೂ ಮುನ್ನ ಮೃತಪಟ್ಟ ವ್ಯಕ್ತಿಗೆ ಮತಹಾಕುವುದನ್ನು ರದ್ದುಗೊಳಿಸುವ ನಿಮಯ ಇದುವರೆಗೂ ಬಂದಿಲ್ಲ. ನಿಗದಿಯಂತೆ ಚುನಾವಣೆ ನಡೆದಿದೆ ಎಂದು ಉಪಾಧ್ಯಾಯ ಹೇಳಿದ್ದಾರೆ.
ನಿನ್ನೆ ಮತ ಏಣಿಕೆ ಪ್ರಕ್ರಿಯೆ ನಡೆದಿದ್ದು, ಮೃತ ರಂಗಿಲಾಲ್ ಅವರು ಉತ್ತಮ ಹಂತರದಿಂದ ಗೆಲವು ಸಾಧಿಸಿದ್ದಾರೆ. ಪ್ರತಿಸ್ಫರ್ಧಿ ರಾಜ್‌ಕುಮಾರ್ ಅವರು 61 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಅವರು ತಿಳಿಸಿದರು.