ವೈಫೈ ಹಾಟ್‍ಸ್ಪಾಟ್‍ಗೆ ಫೇಸ್‍ಬುಕ್ ನೆರವು

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಒತ್ತು ನೀಡುವತ್ತ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಹೆಜ್ಜೆಯಿಟ್ಟಿದೆ. ಅದರಂತೆ, ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಜತೆಗೂಡಿ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ 100 ವೈಫೈ ಸೈಟ್ ಗಳನ್ನು ಆರಂಭಿಸಲು ಫೇಸ್ ಬುಕ್ ನಿರ್ಧರಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಒತ್ತು ನೀಡುವತ್ತ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಹೆಜ್ಜೆಯಿಟ್ಟಿದೆ. ಅದರಂತೆ, ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಜತೆಗೂಡಿ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ 100 ವೈಫೈ ಸೈಟ್ ಗಳನ್ನು ಆರಂಭಿಸಲು ಫೇಸ್ ಬುಕ್ ನಿರ್ಧರಿಸಿದೆ.

ಪಶ್ಚಿಮ ಮತ್ತು ದಕ್ಷಿಣ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 100 ವೈಫೈ ಹಾಟ್ ಸ್ಪಾಟ್ ರಚಿಸಲು ವರ್ಷಕ್ಕೆ ರು.5 ಕೋಟಿ ವೆಚ್ಚ ಮಾಡುವುದಾಗಿ ಫೇಸ್ ಬುಕ್ ಘೋಷಿಸಿದೆ. ಅದು ಪ್ರತಿ ಬ್ಯಾಂಡ್ ವಿಡ್ತ್ ಗೆ ರು.5 ಲಕ್ಷದಂತೆ, ವರ್ಷಕ್ಕೆ ರು.5 ಕೋಟಿ ನೀಡಲಿದೆ ಎಂದು ಬಿಎಸ್ಸೆನ್ನಲ್ ಮುಖ್ಯಸ್ಥ ಮತ್ತು ಎಂಡಿ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ. ಈ ಒಪ್ಪಂದದ ಪ್ರಕಾರ, ನಾವು ಈಗಾಗಲೇ 25 ಹಾಟ್ ಸ್ಪಾಟ್ ಗಳನ್ನು ರಚಿಸಿದ್ದೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಈ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ ಎಂದಿರುವ ಫೇಸ್ ಬುಕ್ ವಕ್ತಾರರು, ಈಗ ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದನ್ನು ಮತ್ತೆರಡು ವರ್ಷ ವಿಸ್ತರಿಸುವ ಸಾಧ್ಯತೆಯಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com