ಛೋಟಾ ರಾಜನ್ ಇಂದು ರಾತ್ರಿ ಭಾರತಕ್ಕೆ ಗಡಿಪಾರು, ಮುಂಬೈಯಲ್ಲಿ ಬಿಗಿ ಭದ್ರತೆ

ಇಂಡೋನೇಷ್ಯಾದಲ್ಲಿ ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ಛೋಟಾ ರಾಜನನ್ನು ಮಂಗಳವಾರ ರಾತ್ರಿ ಭಾರತಕ್ಕೆ ಗಡಿಪಾರು ಮಾಡಲಾಗುತ್ತಿದೆ.
ಛೋಟಾ ರಾಜನ್
ಛೋಟಾ ರಾಜನ್

ಬಾಲಿ: ಇಂಡೋನೇಷ್ಯಾದಲ್ಲಿ ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ಛೋಟಾ ರಾಜನನ್ನು ಮಂಗಳವಾರ ರಾತ್ರಿ ಭಾರತಕ್ಕೆ ಗಡಿಪಾರು ಮಾಡಲಾಗುತ್ತಿದೆ.

ಬಾಲಿಯ ಪೊಲೀಸರ ವಶದಲ್ಲಿರುವ ಛೋಟಾ ರಾಜನ್ ನನ್ನು ತಮ್ಮ ವಶಕ್ಕೆ ಪಡೆದು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಭಾರತದ ಅಧಿಕಾರಿಗಳು ಇಂಡೋನೇಷ್ಯಾದ ಅಧಿಕಾರಿಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನು ಪ್ರಕ್ರಿಯೆ ಮುಗಿದ ಕೂಡಲೇ ಗ್ಯಾಂಗ್ ಸ್ಟರ್ ಛೋಟಾ ರಾಜನನ್ನು ಭಾರತಕ್ಕೆ ಕರೆ ತರಲಾಗುತ್ತಿದೆ ಎಂದು ಜಕಾರ್ತ್ ಇಂಟರ್ ಪೋಲ್ ಖಚಿತಪಡಿಸಿದೆ.

ರಾಜನ್ ಗಡಿಪಾರಿಗೆ ಇಂಟರ್ ಪೋಲ್ ಈಗಾಗಲೇ ಅನುಮತಿ ನೀಡಿದ್ದು, ಭೂಗತ ಪಾತಕಿಯನ್ನು ಬಾಲಿಯಿಂದ ಮುಂಬೈಗೆ ಕರೆತರುತ್ತಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಅಲ್ಲದೇ ಪಾತಕಿಯನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ರಾಜನ್ ನನ್ನು ಅರ್ಥೂರ್ ರಸ್ತೆಯಲ್ಲಿರುವ ಜೈಲಿನ ಅಂಡಾ ಸೆಲ್ ನ(ಮೊಟ್ಟೆಯಾಕಾರದ)ಲ್ಲಿಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com