ತಮಿಳುನಾಡಿನಲ್ಲಿ ಮುಂದುವರಿದ ಭಾರಿ ಮಳೆ: ಸಾವಿನ ಸಂಖ್ಯೆ 71ಕ್ಕೆ ಏರಿಕೆ

ಈಶಾನ್ಯ ಮಾರುತದಿಂದಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ತಮಿಳುನಾಡು ಅಕ್ಷರಶಃ ಸ್ತಬ್ಧಗೊಂಡಿದೆ...
ಭಾರಿ ಮಳೆಯಿಂದಾಗಿ ಚೆನ್ನೈ ಜನತೆಯ ಪರೆದಾಟ
ಭಾರಿ ಮಳೆಯಿಂದಾಗಿ ಚೆನ್ನೈ ಜನತೆಯ ಪರೆದಾಟ
Updated on: 
ಚೆನ್ನೈ: ಈಶಾನ್ಯ ಮಾರುತದಿಂದಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ತಮಿಳುನಾಡು ಅಕ್ಷರಶಃ ಸ್ತಬ್ಧಗೊಂಡಿದೆ. ಸೋಮವಾರ ಮತ್ತೆ 12 ಮಂದಿ ಮೃತಪಟ್ಟಿದ್ದಾರೆ.
ಈ ಮೂಲಕ ಮಳೆ ಅನಾಹುತಕ್ಕೆ ಮೃತ- ಪಟ್ಟವರ ಸಂಖ್ಯೆ71ಕ್ಕೇರಿದಂತಾಗಿದೆ. ಚೆನ್ನೈ ನಗರ ಜವಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಖ್ಯ ಮಂತ್ರಿ ಜಯಲಲಿತಾ ಸಂಪುಟ ಸಹೋದ್ಯೋಗಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ. 
ತಮಿಳುನಾಡಿನಲ್ಲಿನ ಮಳೆ ಪ್ರಭಾವ ಕರ್ನಾಟಕದ ಮೇಲೂ ಆಗಿದೆ. ದಕ್ಷಿಣ ಒಳನಾಡಿನಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದೆ. ತಮಿಳುನಾಡಿನ ನೈರುತ್ಯ ಕರಾವಳಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಭಾರಿ ಮಳೆ ಸುರಿಯುತ್ತಿದೆ. 
ಇದು ಉತ್ತರಕ್ಕೆ ಚಲಿಸುತ್ತಿದ್ದು, ಅಲ್ಲಿನ ಕರಾವಳಿಯಲ್ಲೂ ಮುಂದಿನ 24 ಗಂಟೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿಕ್ಷಣ ಸಂಸ್ಥೆಗಳಿಗೆ ರಜೆ: ಕಳೆದೊಂದು ವಾರದಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ತಮಿಳುನಾಡಿನ ಜನಜೀವನ ಏರುಪೇರಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. 
ಭಾನುವಾರ ರಾತ್ರಿಯಿಂದ ತಮಿಳುನಾಡಿನ ಬಹುತೇಕ ಕಡೆ ಎಡೆಬಿಡದೆ ಮಳೆ ಸುರಿದಿದೆ. ತಂಬರಂ ಮತ್ತು ಮಹಾಬಲಿ ಪುರಂನಲ್ಲಿ 33 ಸೆ.ಮೀ ಹಾಗೂ ತಿರುವಲೂರು ಭಾಗದಲ್ಲಿ 30 ಸೆ.ಮೀ. ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತವಾಗಿದ್ದರೂ ರಾಜ್ಯದ ಹೆಚ್ಚೂ ಕಡಿಮೆ ಎಲ್ಲ ಜಲಾಶಯಗಳು ತುಂಬುವ ಹಂತಕ್ಕೆ ಬಂದಿದ್ದು, ರೈತಾಪಿ ವರ್ಗದಲ್ಲಿ ಒಂದಷ್ಟು ಹರ್ಷವನ್ನೂ ತಂದಿದೆ. 
ಚೆನ್ನೈ ನಗರದಲ್ಲಿ 2005ರಲ್ಲಿ ಭೀಕರ ನೆರೆ ಕಾಣಿಸಿಕೊಂಡಿತ್ತು. ಆ ಬಳಿಕ ನಗರ ಈ ರೀತಿ ಜಲಾವೃತವಾಗಿರುವುದು ಇದೇ ಮೊದಲು. ನೀರಿನಲ್ಲಿ ಮುಳುಗಿರುವ ಸ್ಥಿತಿಯಲ್ಲಿರುವ ಚೆನ್ನೈನ ಆರ್.ಕೆ. ನಗರ ಕ್ಷೇತ್ರದಲ್ಲಿ ಪರಿಸ್ಥಿತಿ ಅವಲೋಕಿಸಿದ ಮುಖ್ಯಮಂತ್ರಿ ಜಯಲಲಿತಾ, ತ್ವರಿತಗತಿಯಲ್ಲಿ ಪರಿಹಾರ ಕಾರ್ಯಾ-ಚರಣೆ ನಡೆಸುವುದಾಗಿ ಹೇಳಿದರು. 
ಅಲ್ಲದೆ ಪರಿಹಾರಕ್ಕಾಗಿ ರು.500 ಕೋಟಿ ನೆರವನ್ನೂ ಘೋಷಿಸಿದ್ದಾರೆ. ಇದೇ ವೇಳೆ, ಪರಿಹಾರ ಕಾರ್ಯಾ ಚರಣೆಗಾಗಿ ರಾಷ್ಟ್ರೀಯ ವಿಕೋಪ ಪರಿಹಾರ ತಂಡದ 11 ತಂಡಗಳು ತಮಿಳುನಾಡಿಗೆ ಆಗಮಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com