ನವದೆಹಲಿ: ಮುಂದಿನ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರು ಸಂಖ್ಯೆ 40.20 ಕೋಟಿ ತಲುಪುವ ನಿರೀಕ್ಷೆಗಳಿದ್ದು ಸದ್ಯ ಎರಡನೇ ಸ್ಥಾನದಲ್ಲಿರುವ ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಒಕ್ಕೂಟ (ಐಎಎಂಎಐ) ಹೇಳಿದೆ. ಒಟ್ಟಾರೆ ಇಂಟರ್ನೆಟ್ ಬಳಕೆ ಮಾಡುವವರ ಪೈಕಿ 30.60 ಕೋಟಿ ಮಂದಿ ಮೊಬೈಲ್ಗಳಿಗೆ ಸಂಪರ್ಕ ಪಡೆದಿದ್ದಾರೆ. ಕಳೆದ ವರ್ಷದ ಅಕ್ಟೋಬರ್ವರೆಗೆ ಈ ಸಂಖ್ಯೆ 27.60 ಕೋಟಿ ಇದ್ದದು ಈ ವರ್ಷದಲ್ಲಿ ಗಣನೀಯ ಏರಿಕೆ ಕಂಡಿದೆ. ಚೀನಾದಲ್ಲಿ 60 ಕೋಟಿ ಬಳಕೆದಾರರಿದ್ದು ಮೊದಲ ಸ್ಥಾನದಲ್ಲಿದೆ.