ಹಕ್ಕಿಗಳಿಗೆ ಹಾರುವ ಹಕ್ಕು ಇದೆಯೇ?

ಹಕ್ಕಿಗಳಿಗೂ ಮೂಲಭೂತ ಹಕ್ಕು ಇದೆಯೇ? ಹೌದು ಹೀಗೆ ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ...
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)

ನವದೆಹಲಿ: ಹಕ್ಕಿಗಳಿಗೂ ಮೂಲಭೂತ ಹಕ್ಕು ಇದೆಯೇ? ಹೌದು ಹೀಗೆ ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ.

``ಹಕ್ಕಿಗಳನ್ನು ಪಂಜರದಲ್ಲಿಡುವುದರಿಂದ ಹಾರಾಡುವ ಅವುಗಳ ಸ್ವಾತಂತ್ರ್ಯವನ್ನು ಉಲ್ಲಂಘಿಸಿಂದತಾಗುತ್ತದೆಯೇ,'' ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ವಿಚಾರಣೆಗಾಗಿ ಕೈಗೆತ್ತಿಕೊಂಡಿದೆ ಎಂದು ಶನಿವಾರ `ದ ಟೈಮ್ಸ್ ಆಫ್ಇಂಡಿಯಾ' ವರದಿ ಮಾಡಿದೆ.

``ಹಕ್ಕಿಗಳಿಗೂ ಮುಕ್ತವಾಗಿ ಆಕಾಶದಲ್ಲಿ ಹಾರಾಡುವ ಮೂಲಭೂತ ಹಕ್ಕಿದೆ. ಹಕ್ಕಿಗಳ ನ್ನು ಪಂಜರದಿಂದ ಕೂಡಿಹಾಕದೆ ಅವುಗಳ ಸ್ವಾತಂತ್ರ್ಯವನ್ನು ಗೌರವಿಸಬೇಕು,'' ಎಂದು ಗುಜರಾತ್ ಹೈಕೋರ್ಟ್ ಪ್ರಕರಣವೊಂದರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂತಿರ್  ಎಚ್.ಎಲ್. ದತ್ತು, ನ್ಯಾ. ಶಿವಕೀರ್ತಿ ಸಿಂಗ್ ಮತ್ತು ನ್ಯಾ.ಅಮಿತಾವಾರಾಯ್ ಅವರಿದ್ದ ಪೀಠ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ. ಬೀದಿ ವ್ಯಾಪಾರಿಗಳು 494 ಹಕ್ಕಿಗಳನ್ನು ಪಂಜರದಲ್ಲಿ ಕೂಡಿಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಈ ತೀರ್ಪು ನೀಡಿತ್ತು. ಬಹುತೇಕ ಪ್ರಕರಣಗಳಲ್ಲಿ ಹಕ್ಕಿಗಳ ರೆಕ್ಕೆ ಮತ್ತು ಬಾಲಗಳನ್ನು ಕತ್ತರಿಸಲಾಗುತ್ತಿತ್ತು.

ಕೆಲವು ಪ್ರಕರಣಗಳಲ್ಲಂತೂ ಅವುಗಳು ಹಾರದಂತೆ ರೆಕ್ಕೆಗೆ ಗೋಂದು ಹಾಕಿ ಅಂಟಿಸಲಾಗುತ್ತಿತ್ತು. ಕಾಲಿಗೆ ಭಾರವಾದ ರಿಂಗ್‍ಗಳನ್ನೂ ಹಾಕಲಾಗಿತ್ತು. ಇದು ಬಹುತೇಕ ಹಕ್ಕಿ ಬಜಾರ್‍ಗಳಲ್ಲಿ ಮಾಮೂಲಿ. ಈ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ ``ಹಕ್ಕಿಗಳನ್ನು ಈ ರೀತಿ ಬಂಧಿಸಿಡುವುದು ಅಪರಾಧ. ಅವುಗಳಿಗೂ ನೈಸರ್ಗಿಕ ವಾತಾವರಣದಲ್ಲಿ ಮುಕ್ತ ಆಕಾಶದಲ್ಲಿ ಹಾರಾಡುವ ಸ್ವಾತಂತ್ರ್ಯವಿದೆ. ಈ ಹಕ್ಕಿಗಳಿಗೆ ಯಾವುದೇ ನೋವಾಗದಂತೆ ನೋಡಿಕೊಳ್ಳುವುದು ಎಲ್ಲ ನಾಗರಿಕರ ಕರ್ತವ್ಯ,'' ಎಂದು ಅಭಿಪ್ರಾಯಪಟ್ಟಿತ್ತು.

ಹೈಕೋರ್ಟ್‍ನ ಈ ತೀರ್ಪನ್ನು ಪ್ರಶ್ನಿಸಿ ಪ್ರಾಣಿ ಪ್ರೇಮಿ ಸಂಘವೊಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಗುಜರಾತ್ ಹೈಕೋರ್ಟ್‍ನ ತೀರ್ಪನ್ನು ಪ್ರಶ್ನಿಸಿರುವ ಈ ಸಂಘ, ``ಪ್ರಾಣಿಗಳ ಕಾಯ್ದೆ ಹಾಗೂ ಅರಣ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಾಣಿಗಳ ಮೇಲಿನ ಹಿಂಸೆ ತಡೆ ನಿಬಂಧನೆಗೆ ವಿರುದ್ಧವಾಗಿದೆ,'' ಎಂದು ವಾದಿಸಿದೆ. ಹಕ್ಕಿಗಳನ್ನು ಪಂಜದಲ್ಲಿಡುವುದು ಮತ್ತು ಪ್ರಾಣಿಗಳ ವ್ಯಾಪಾರವನ್ನು ನಿಷೇಧಿಸಬಾರದು ಎಂದು ಒತ್ತಾಯಿಸಿದೆ. ಗುಜರಾತ್ ಕೋಟ್ರ್ ನ ಈ ತೀರ್ಪಿನಿಂದಾಗಿ ವ್ಯಾಪಾರಿಗಳಿಗೆ ವಿನಾ ಕಾರಣ ಕಿರುಕುಳ ಆಗುತ್ತಿದೆ ಎಂದು ಎನ್ ಜಿಒ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com