ಉಸ್ಮಾನಿಯಾ ಮತ್ತು ಗಾಂಧಿ ಆಸ್ಪತ್ರೆಯಿಂದ 117 ರೋಗಿಗಳು ನಾಪತ್ತೆ!

ಹೈದರಾಬಾದ್ ನ ಉಸ್ಮಾನಿಯಾ ಜನರಲ್ ಆಸ್ಪತ್ರೆ ಮತ್ತು ಗಾಂಧಿ ಆಸ್ಪತ್ರೆಗಳಿಂದ ಸುಮಾರು 117 ರೋಗಿಗಳು ನಾಪತ್ತೆಯಾಗಿದ್ದಾರೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಹೈದರಾಬಾದ್ ನ ಉಸ್ಮಾನಿಯಾ ಜನರಲ್ ಆಸ್ಪತ್ರೆ ಮತ್ತು ಗಾಂಧಿ ಆಸ್ಪತ್ರೆಗಳಿಂದ ಸುಮಾರು 117 ರೋಗಿಗಳು ನಾಪತ್ತೆಯಾಗಿದ್ದಾರೆ ಎಂಬುದು ಮಾಹಿತಿ ಹಕ್ಕು ಕಾಯಿದೆಯಿಂದ ಬಹಿರಂಗವಾಗಿದೆ.

ಜನವರಿ 1ರಿಂದ ಆಗಸ್ಟ್ 15 ರ ನಡುವೆ ಈ ಎರಡು ಆಸ್ಪತ್ರೆಗಳಿಂದ ಹಲವಾರು ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 117 ರೋಗಿಗಳು ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ಲೋಕಸತ್ತಾ ಪಕ್ಷ ಮತ್ತು ಸತ್ಯ ಹರಿಶ್ಚಂದ್ರ ಫೌಂಡೇಶನ್ ನ ಸದಸ್ಯರು ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿಷಯ ಬಹಿರಂಗವಾಗಿದೆ. ಅನಾಥ ಶವಗಳು ಕೂಡ ನಾಪತ್ತೆಯಾಗುತ್ತಿದ್ದು, ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಎಂದು ಆರೋಪಿಸಲಾಗಿದೆ.

ಇನ್ನು ಕಳೆದ 10 ವರ್ಷಗಳಿಂದ ಅನಾಥ ಶವಗಳು ನಾಪತ್ತೆಯಾಗುತ್ತಿದ್ದು, ಈ ಸಂಬಂಧ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com