ಪ್ರತಿಪಕ್ಷಗಳ ನಿರ್ಣಯ ಆಗಬಾರದು: ಆದರೂ ಈ ವಿಚಾರವನ್ನು ಬೆಳೆಸಿದ ಕಾಂಗ್ರೆಸ್ ನ ರಮೇಶ್‍ಕುಮಾರ್, ಲೋಕಾ ಯುಕ್ತ ಪದಚ್ಯುತಿ ಬಗ್ಗೆ ಇಡೀ ಸದನವೇ ತೀರ್ಮಾನ ಕೈಗೊಂಡಿದೆ ಎನ್ನುವ ಸಂದೇಶ ಹೋಗಬೇಕಿದೆ. ಆದ್ದರಿಂದ ಅವಸರ ಬೇಡ ಎಂದರು. ಆಗ ಸಿಟ್ಟಿಗೆದ್ದ ಜಗದೀಶ್ ಶೆಟ್ಟರ್, ಹೀಗಾಗುತ್ತದೆ ಎಂದೇ ನಾನು ನಿರ್ಣಯಕ್ಕೆ ಕಾಂಗ್ರೆಸ್ ಶಾಸಕರೂ ಸಹಿ ಮಾಡಬೇಕೆಂದು ಕೇಳಿದ್ದೆ. ಆದರೆ ನೀವು ಕೇಳಲಿಲ್ಲ ಎಂದು ಜರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಿರ್ಣಯ ಪ್ರತಿ ಪಕ್ಷದಿಂದ ಬಂದಿದೆ. ಲೋಕಾ ಯುಕ್ತರ ಪದಚ್ಯುತಿ ಸದನದ ನಿರ್ಣಯ ವಾಗಬೇಕೆನ್ನುವುದಷ್ಟೇ ಸರ್ಕಾರದ ಆಶಯ ಎಂದರು. ಇದಕ್ಕೆ ಸಮ್ಮತಿಸಿದ ಸ್ವೀಕರ್, ಈಗ ಪ್ರಸ್ತಾವವನ್ನು ಸ್ವೀಕರಿಸಲಾಗಿದೆಯೆೀ ವಿನಃ ನಿರ್ಣಯವಾಗಿಲ್ಲ. ಈ ಬಗ್ಗೆ ಕರಡು ಪ್ರಸ್ತಾಪ ಸಿದ್ಧಪಡಿಸಿ ಸದನದ ಮುಖಂಡರೊಂದಿಗೆ ಚರ್ಚಿಸಿ ನಂತರ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದರು.