

ಪಾಟ್ನಾ: ಖಾಸಗಿ ಟಿವಿ ಚಾನೆಲ್‌ವೊಂದಕ್ಕೆ ನಿತಿಶ್ ಕುಮಾರ್ ಹತ್ಯೆ ಮಾಡುವುದಾಗಿ ಮೊಬೈಲ್ ಮೆಸೇಜ್ ಬಂದಿದ್ದು, ಬಿಹಾರ ಮುಖ್ಯಮಂತ್ರಿಯ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಎಸ್‌ಎಂಎಸ್ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ವೈಭವ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಸಂಬಂಧ ಸೆಕ್ಷೆನ್ 387ರಡಿ ಶ್ರೀಕೃಷ್ಣ ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವೈಭವ್ ತಿಳಿಸಿದರು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಇನ್ನು ಬೆದರಿಕೆ ಮೆಸೇಜ್ ಸ್ವೀಕರಿಸಿರುವ 'ಕಶಿಶ್' ಟಿವಿ ಚಾನೆಲ್, ಈ ಮೆಸೇಜ್ ವ್ಯಕ್ತಿಯೊಬ್ಬರು ತಮ್ಮ ಅಧಿಕೃತ ಮೊಬೈಲ್‌ನಿಂದ ಕಳುಹಿಸಿದ್ದಾರೆ ಮತ್ತು ಇದು ಹೊರ ರಾಜ್ಯದಿಂದ ಬಂದ ಮೆಸೇಜ್ ಎಂದು ಹೇಳಿದೆ.