ಇಸ್ರೇಲ್ ರಾಯಭಾರಿ ಕಚೇರಿ (ಸಂಗ್ರಹ ಚಿತ್ರ)
ಇಸ್ರೇಲ್ ರಾಯಭಾರಿ ಕಚೇರಿ (ಸಂಗ್ರಹ ಚಿತ್ರ)

ಭಯೋತ್ಪಾದನೆ ವಿರುದ್ಧದ ಭಾರತ ಹೋರಾಟಕ್ಕೆ ಕೈ ಜೋಡಿಸುತ್ತೇವೆ: ಇಸ್ರೇಲ್

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಕೈಜೋಡಿಸುತ್ತೇವೆಂದು ಇಸ್ರೇಲ್ ಗುರುವಾರ ಹೇಳಿದೆ...

ನವದೆಹಲಿ: ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಕೈಜೋಡಿಸುತ್ತೇವೆಂದು ಇಸ್ರೇಲ್ ಗುರುವಾರ ಹೇಳಿದೆ.

26/11, 2008 ವಾಣಿಜ್ಯ ನಗರ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ ಇಂದಿಗೆ 7 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ರಾಯಭಾರಿ, 26/11ರಂದು ಮುಂಬೈನಲ್ಲಿ ನಡೆದ ಘಟನೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ಉಗ್ರರು ದಾಳಿ ಮಾಡಿ ಇಂದಿಗೆ 7 ವರ್ಷ ಕಳೆದಿದೆ. ದಾಳಿಯಲ್ಲಿ ಇಸ್ರೇಲ್ ಜನ ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿದ್ದರು. ದಾಳಿ ವೇಳೆ ಸಾಕಷ್ಟು ಮಂದಿ ಅಂಗಾಂಗಗಳನ್ನು ಕಳೆದುಕೊಂಡರು, ಈ ಘಟನೆ ಎಷ್ಟೋ ಮಂದಿ ಮನಸ್ಸಿಗೆ ನೋವುಂಟು ಮಾಡಿತ್ತು ಎಂದು ಹೇಳಿದೆ.

ಭಯೋತ್ಪಾದನೆಯನ್ನು ನಿಗ್ರಹಗೊಳಿಸಲು ಎಲ್ಲಾ ರಾಷ್ಟ್ರಗಳು ಒಂದುಗೂಡಬೇಕಿದ್ದು, ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ. ಉಗ್ರರು ಎಲ್ಲಿ ಯಾವಾಗ ಬೇಕಿದ್ದರೂ ದಾಳಿ ಮಾಡಬಹುದು. ಉಗ್ರರು ಮುಂಬೈ, ಪ್ಯಾರೀಸ್, ನ್ಯೂಯಾರ್ಕ್, ಬಮಾಕೋ, ಜೆರುಸೆಲಂ ಮತ್ತು ಇದರೆ ದೇಶಗಳ ಮೇಲೂ ದಾಳಿ ಮಾಡಬಹುದು. ಉಗ್ರರ ನಿರಂತರ ದಾಳಿಗೆ ಇಸ್ರೇಲ್ ಕೂಡ ಬಲಿಯಾಗಿದೆ. ಭಯೋತ್ಪಾದನೆ ವಿರುದ್ಧದ ಭಾರತ ಹೋರಾಟಕ್ಕೆ ನಾವು ಕೈ ಜೋಡಿಸುತ್ತೇವೆ ಎಂದು ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com