ಮದ್ಯ ನಿಷೇಧ ಆಯ್ತು, ಈಗ ಬಿಹಾರದ ಜನತೆಗೆ ಉಚಿತ ವಿದ್ಯುತ್ ಸಂಪರ್ಕ ಯೋಜನೆ

ಬಿಹಾರ ಸಿಎಂ ನಿತೀಶ್ ಕುಮಾರ್, 2017 ವೇಳೆಗೆ ಬಿಹಾರದ ಎಲ್ಲಾ ಜನತೆಗೆ ಉಚಿತ ವಿದ್ಯುತ್ ಸಂಪರ್ಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿದ್ಯುತ್ ಸಂಪರ್ಕ(ಸಾಂಕೇತಿಕ ಚಿತ್ರ)
ವಿದ್ಯುತ್ ಸಂಪರ್ಕ(ಸಾಂಕೇತಿಕ ಚಿತ್ರ)
Updated on: 

ಪಾಟ್ನ: ಚುನಾವಣೆ ವೇಳೆ ನೀಡಿದ್ದ ಭರವಸೆಗಳ ಪೈಕಿ ಮತ್ತೊಂದನ್ನು ಈಡೇರಿಸಲು ಮುಂದಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್, 2017 ವೇಳೆಗೆ ಬಿಹಾರದ ಎಲ್ಲಾ ಜನತೆಗೆ ಉಚಿತ ವಿದ್ಯುತ್ ಸಂಪರ್ಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಏಳು ಭರವಸೆಗಳ ಪೈಕಿ ಮದ್ಯ ನಿಷೇಧ ಮಾಡುವುದು, ಬಿಹಾರದ ಜನತೆಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದೂ ಒಂದಾಗಿತ್ತು. ಈಗಾಗಲೇ ಮದ್ಯ ನಿಷೇಧಕ್ಕೆ ಆದೇಶ ನೀಡಲಾಗಿದ್ದು ಸರ್ಕಾರದ ಆದೇಶ 2016 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
" ವಿದ್ಯುತ್ ಸಂಪರ್ಕವನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಆದರೆ ವಿದ್ಯುತ್ ಬಳಕೆ ಮಾಡಿರುವುದಕ್ಕೆ ಸಾರ್ವಜನಿಕರು ಹಣ ಪಾವತಿಸಬೇಕು" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಉಚಿತ ವಿದ್ಯುತ್ ಸಂಪರ್ಕ ನೀಡುವ ಯೋಜನೆಗೆ 1 ,500 - 1,800 ಕೋಟಿ ರುಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ಯೋಜನೆ ಬಡತನ ರೇಖೆಗಿಂತಲೂ ಕೆಳಗಿರುವವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಸರ್ಕಾರ ನಿರ್ಧಾರ ಬದಲಾಯಿಸಿ ಎಲ್ಲರಿಗೂ ಈ ಯೋಜನೆಯನ್ನು ಜಾರಿ ಮಾಡಲು ಆದೇಶ ನೀಡಿದೆ. 39 ,073  ಗ್ರಾಮಗಳ ಪೈಕಿ 2 ,719 ಗ್ರಾಮಗಳು ಸಂಪೂರ್ಣ ವಿದ್ಯುತ್ ಸಂಪರ್ಕವನ್ನು ಪಡೆಯಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com