ರಾಜಧಾನಿ ದೆಹಲಿ ಮೇಲೆ ಉಗ್ರರ ಕೆಂಗಣ್ಣು: ವೈಮಾನಿಕ ದಾಳಿಗೆ ಸಜ್ಜು

ದೇಶದಾದ್ಯಂತ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಇಸಿಸ್ ಉಗ್ರ ಸಂಘಟನೆಯ ಕೆಂಗಣ್ಣು ಇದೀಗ ರಾಜಧಾನಿ ದೆಹಲಿ ಮೇಲೆ ಬಿದ್ದಿದ್ದು, ದೆಹಲಿ ಮೇಲೆ ಇಸಿಸ್ ಉಗ್ರರು ವೈಮಾನಿಕ ದಾಳಿ ನಡೆಸುವ ಸಂಭವವಿದೆ ಎಂದು ಗೃಹ ಇಲಾಖೆ ಶನಿವಾರ ಎಚ್ಚರಿಕೆ ನೀಡಿದೆ...
ರಾಜಧಾನಿ ದೆಹಲಿ ಮೇಲೆ ಉಗ್ರರ ಕೆಂಗಣ್ಣು  (ಸಾಂದರ್ಭಿಕ  ಚಿತ್ರ)
ರಾಜಧಾನಿ ದೆಹಲಿ ಮೇಲೆ ಉಗ್ರರ ಕೆಂಗಣ್ಣು (ಸಾಂದರ್ಭಿಕ ಚಿತ್ರ)
Updated on: 

ನವದೆಹಲಿ: ದೇಶದಾದ್ಯಂತ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಇಸಿಸ್ ಉಗ್ರ ಸಂಘಟನೆಯ ಕೆಂಗಣ್ಣು ಇದೀಗ ರಾಜಧಾನಿ ದೆಹಲಿ ಮೇಲೆ ಬಿದ್ದಿದ್ದು, ದೆಹಲಿ ಮೇಲೆ ಇಸಿಸ್ ಉಗ್ರರು ವೈಮಾನಿಕ ದಾಳಿ ನಡೆಸುವ ಸಂಭವವಿದೆ ಎಂದು ಗೃಹ ಇಲಾಖೆ ಶನಿವಾರ ಎಚ್ಚರಿಕೆ ನೀಡಿದೆ.

ದಾಳಿ ನಡೆಸುವ ಸಲುವಾಗಿ ಈಗಾಗಲೇ ಉಗ್ರರು ಯೋಜನೆ ರೂಪಿಸಿದ್ದು, ಭಾರತ ಪ್ರಮುಖ 15 ನಗರಗಳ ಮೇಲೆ ದಾಳಿ ನಡೆಸಲು ಉಗ್ರರು ಯೋಜನೆ ರೂಪಿಸಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ಭದ್ರತಾಧಿಕಾರಿಗಳಿಗೆ ಗೃಹ ಇಲಾಖೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ. 

ಗೃಹ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಉಗ್ರರು ಪ್ರಧಾನಮಂತ್ರಿ ಗೃಹ, ಗೃಹ ಸಚಿವರು ಹಾಗೂ ಉಪ ರಾಷ್ಟ್ರಪತಿಯವರ ಮನೆ, ರಾಷ್ಟ್ರಪತಿ ಭವನ, ರಾಜಪಥ್, ಇಂಡಿಯಾ ಗೇಟ್ ಹಾಗೂ ಸಿಬಿಐ, ಸಿಐಎಸ್ಎಫ್, ಬಿಎಸ್ಎಫ್ ಪ್ರಧಾನ ಕಚೇರಿಗಳಿರುವ ಸಿಜಿಒ ಕಾಂಪ್ಲೆಕ್ಸ್ ಗಳನ್ನು ಗುರಿಯಾಗಿರಿಸಿಕೊಂಡಿರುವ ಉಗ್ರರು  ಮಾನವರಹಿತ ವಾಯು ವ್ಯವಸ್ಥೆ, ಡ್ರೋಣ್, ಹಾಗೂ ಪ್ಯಾರಾಮೋಟಾರ್ಸ್ ಗಳ ಮುಖಾಂತರ ದಾಳಿ ನಡೆಸಲಿದ್ದಾರೆಂದು ಅಧಿಕಾರಿಗಳಿಗೆ ಮಾಹಿತಿ ನೀಡಿದೆ.

ಗೃಹ ಸಚಿವಾಲಯ ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಈಗಾಗಲೇ ನವದೆಹಲಿಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ನಗರದಲ್ಲಿ ಅನಾಮಧೇಯ ಹಾಗೂ ಅನುಮಾನಾಸ್ಪದವಾಗಿ ವ್ಯಕ್ತಿಗಳು ಕಂಡರೆ ಗುಂಡು ಹಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ದೆಹಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ನಗರದ ಮೇಲೆ ದಾಳಿ ಮಾಡುವ ಅನೇಕ ಬೆದರಿಕೆ ಸಂದೇಶಗಳು ಬರುತ್ತಿರುತ್ತವೆ. ಆದರೆ ವೈಮಾನಿಕ ದಾಳಿ ಎಚ್ಚರಿಕೆಯೆಂಬುದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ಭದ್ರತಾ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳು ಈಗಾಗಲೇ ದೆಹಲಿ ದಾಳಿ ಕುರಿತಂತೆ ಮಾಹಿತಿ ನೀಡಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲೇ ಬೆದರಿಕೆಗಳಿಗೆ ಉತ್ತರ ನೀಡಲಿದೆ ಎಂದು ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com