ಜಿಎಸ್‍ಟಿ ಕುರಿತು ರಾಹುಲ್-ಖರ್ಗೆ ಮಾತು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸರಕು...
ಮಲ್ಲಿಕಾರ್ಜುನ ಖರ್ಗೆ- ರಾಹುಲ್ ಗಾಂಧಿ
ಮಲ್ಲಿಕಾರ್ಜುನ ಖರ್ಗೆ- ರಾಹುಲ್ ಗಾಂಧಿ
Updated on: 
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಸೂದೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರ ಕುರಿತು ಚರ್ಚಿಸಿದರು. 
ಜಿಎಸ್ ಟಿ ಮಸೂದೆ ಜಾರಿಗೆ ಸಹಕಾರ ಕೋರಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿ ಸಮಾಲೋಚಿಸಿದ ಹಿನ್ನೆಲೆಯಲ್ಲಿ ಖರ್ಗೆ-ರಾಹುಲ್ ಭೇಟಿಯಾಗಿದ್ದಾರೆ. 
ಕಾಂಗ್ರೆಸ್ ಜಿಎಸ್ ಟಿ ಮಸೂದೆ ಸೂಚಿಸಿರುವ ಮೂರಂಶಗಳ ಬದಲಾವಣೆಗೆ ಆಡಳಿತ ಪಕ್ಷ ತಾತ್ವಿಕವಾಗಿ ಒಪ್ಪಿದೆ. ಹೀಗಾಗಿ ರಾಜ್ಯ ಸಭೆಯಲ್ಲಿ ಜಿಎಸ್ ಟಿ ಅಂಗೀಕಾರಕ್ಕೆ ಸಹಕರಿಸಿ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಬೇಕಾದ ಅಂಶಗಳ ಬಗ್ಗೆಯೂ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ. 
ಸೋಮವಾರ ಮತ್ತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿ ಸಮಾಲೋಚಿಸಿದ ಹಿನ್ನೆಲೆಯಲ್ಲಿ ಖರ್ಗೆ- ರಾಹುಲ್ ಭೇಟಿಯಾಗಿದ್ದಾರೆ. 
ಕಾಂಗ್ರೆಸ್ ಜಿಎಸ್ ಟಿ ಮಸೂದೆ ಸೂಚಿಸಿರುವ ಮೂರಂಶಗಳ ಬದಲಾವಣೆಗೆ ಆಡಳಿತ ಪಕ್ಷ ತಾತ್ವಿಕವಾಗಿ ಒಪ್ಪಿದೆ. 
ಹೀಗಾಗಿ ರಾಜ್ಯ ಸಭೆಯಲ್ಲಿ ಜಿಎಸ್ ಟಿ ಅಂಗೀಕಾರಕ್ಕೆ ಸಹಕರಿಸಿ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಬೇಕಾದ ಅಂಶಗಳ ಬಗ್ಗೆಯೂ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ. ಸೋಮವಾರ ಮತ್ತೆ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಖರ್ಗೆ, ಗುಲಾಂ ನಬಿ ಆಜಾದ್ ಮತ್ತಿತರ ನಾಯಕರು ಸಭೆ ಸೇರಿ ಪಕ್ಷದ ಕಾರ್ಯತಂತ್ರದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಆಶಾದಾಯಕ: ಪ್ರಧಾನಿ ನರೇಂದ್ರ ಮೋದಿ-ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಭೇಟಿ ಆಶಾದಾಯಕವಾಗಿತ್ತು. ಜಿಎಸ್ ಟಿ ಜಾರಿಗೆ ಸಹಕಾರ ನೀಡಲು ಸೋನಿಯಾ ಗಾಂಧಿ ತಾತ್ವಿಕವಾಗಿ ಒಪ್ಪಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಕಾಂಗ್ರೆಸ್ ಸೂಚಿಸಿರುವ ಅಂಶಗಳನ್ನು ಸೇರಿಸಿ ಮಾರ್ಪಡಿತ ಮಸೂದೆಯನ್ನು ಮಂಡಿಸಿ ಚಳಿಗಾಲದ ಅಧಿವೇಶನದಲ್ಲೇ ಅಂಗೀಕಾರ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com