ಸಂಸತ್'ನಲ್ಲಿ ಇಂದಿನಿಂದ ಅಸಹಿಷ್ಣುತೆ ಬಗ್ಗೆ ಚರ್ಚೆ

ಕಳೆದ ವಾರ ಆರಂಭವಾಗಿದ್ದ ಸಂಸತ್ ಅಧಿವೇಶನ, ಸೋಮವಾರದಿಂದ ಬಿರುಸು ಪಡೆಯಲಿದೆ. ಲೋಕಸಭೆ, ರಾಜ್ಯ ಸಭೆಗಳಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯಲಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ನವದೆಹಲಿ: ಕಳೆದ ವಾರ ಆರಂಭವಾಗಿದ್ದ ಸಂಸತ್ ಅಧಿವೇಶನ, ಸೋಮವಾರದಿಂದ ಬಿರುಸು ಪಡೆಯಲಿದೆ. ಲೋಕಸಭೆ, ರಾಜ್ಯ ಸಭೆಗಳಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯಲಿದೆ.

ಇನ್ನೊಂದೆಡೆ, ಜಿಎಸ್‍ಟಿ ವಿಧೇಯಕ ಅಂಗೀಕರಿಸಿಕೊಳ್ಳುವ ತವಕದಲ್ಲಿದೆ ಬಿಜೆಪಿ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಯುಗಳು ಈಗಾಗಲೇ ಈ ಚರ್ಚೆಗೆ ನೋಟಿಸ್ ನೀಡಿವೆ. ಲೋಕಸಭೆಯಲ್ಲಿ ಕಾಂಗ್ರೆಸ್, ಸಿಪಿಎಂ ನೋಟಿಸ್ ನೀಡಿದ್ದು, ಅಸಹಿಷ್ಣುತೆ ಘಟನೆಗಳ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಸಚಿವರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲು ಸಜ್ಜಾಗಿವೆ.

ಈಗಾಗಲೇ ನಡೆದಿರುವ 2 ದಿನ ಸದನ ಕಲಾಪ ಸಂವಿಧಾನ ಕರ್ತೃಗಳ ಸ್ಮರಣೆಗೆ ಮೀಸಲಾಗಿದ್ದುದರಿಂದ ಪ್ರತಿಪಕ್ಷಗಳು ಹೆಚ್ಚಿ ನ ಗದ್ದಲಕ್ಕೆ ಮುಂದಾಗಿರಲಿಲ್ಲ. ಆದರೂ ಪ್ರತಿಪಕ್ಷಗಳ ಮುಖಂಡರು ಸರ್ಕಾರವನ್ನು ಈ ವಿಚಾರದಲ್ಲಿ ಟೀಕಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com