

ನವದೆಹಲಿ: ಸೆಟನಿಕ್ ವರ್ಸಸ್ ಪುಸ್ತಕವನ್ನು ನಿಷೇಧಿಸಿದ ಸರ್ಕಾರದ ಕ್ರಮ ತಪ್ಪು ಎಂದಿರುವ ಕಾಂಗ್ರೆಸ್ ನಾಯಕ ಚಿದಂಬರಂ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಲೇಖಕ ಸಲ್ಮಾನ್ ರಶ್ದಿ, ತಪ್ಪು ಸರಿಪಡಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ್ದಾರೆ.
ನಿಷೇಧಿಸಿದ್ದು ತಪ್ಪೆಂಬುದನ್ನು ಒಪ್ಪಿಕೊಳ್ಳಲಿಕ್ಕೆ 27 ವರ್ಷ ಬೇಕಾದವು. ಹಾಗಾದರೆ, ತಪ್ಪನ್ನು ಸರಿಪಡಿಸಿಕೊಳ್ಳಲು ಇನ್ನೆಷ್ಟು ವರ್ಷಗಳು ಬೇಕು ಎಂದು ರಶ್ದಿ ಟ್ವೀಟ್ ಮಾಡಿದ್ದಾರೆ.
ಟ್ವಿಟರಲ್ಲಿ ಸಮರ
ಭಾನುವಾರ ವಾಷಿಂಗ್ಟನ್ ನ ಪುಸ್ತಕ ಮಳಿಗೆಯೊಂದಕ್ಕೆ ಭೇಟಿ ನೀಡಿದ್ದ ಆಮೆರಿಕ ಅಧ್ಯಕ್ಷ ಒಬಾಮ, ರಶ್ದಿ ಅವರ ಟು ಇಯರ್ಸ್ ಏಯ್ಡ್ ಮಂಥ್ಸ್ ಆ್ಯಂಡ್ ಟ್ವೆಂಟಿಐಯ್ಡ್ ನೈಟ್ಸ್ ಪುಸ್ತಕ ಸೇರಿ 9 ಪುಸ್ತಕಗಳನ್ನು ಖರೀದಿಸಿದ್ದಾರೆ. ಇದಕ್ಕೆ ಟ್ವಿಟರ್ ನಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳ ಭರಾಟೆಯೇ ಶುರುವಾಗಿದೆ.
ಲೇಖಕನ ಮೇಲಿದ್ದ ಇರಾನ್ ಫತ್ವಾಕ್ಕೆ ಒಬಾಮ ವಿರೋಧ ವ್ಯಕ್ತಪಡಿಸಿದಂತಾಗಿದೆ ಎಂದು ಟ್ವೀಟಗನೊಬ್ಬ ಹೇಳಿದರೆ, ಖೊಮೇನಿಗೆ ಸಂಬಂಧಿಸಿರದ ಪುಸ್ತಕ ಆಯ್ತುಕೊಂಡಿದ್ದಕ್ಕೆ ಕಾರಣವೇನು ಎಂಬ ಪ್ರಶ್ನೆಯೂ ಮೂಡಿಬಂದಿವೆ.