
ಸಿಂಗಾಪುರ: ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಕಾಣುತ್ತಿರುವುದರಿಂದ ಮತ್ತು ದೇಶಕ್ಕೆ ಆಗಮಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ದೇಶೀಯ ಕಂಪನಿಗಳಲ್ಲಿನ ಪ್ರತಿಭಾನ್ವಿತರಿಗೆ ಹೆಚ್ಚಿನ ವೇತನ ನೀಡಿ ಕರೆದುಕೊಳ್ಳುವುದರಿಂದ ಪ್ರತಿಭಾನ್ವಿತರ ಕೊರತೆ ಎದುರಿಸಲಿದೆ ಎಂದು ಇಲ್ಲಿನ ತಜ್ಞರು ಎಚ್ಚರಿಸಿದ್ದಾರೆ.
ಭಾರತದಲ್ಲಿನ ಕಂಪನಿಗಳು ಅಲ್ಲಿನ ಸಿಬ್ಬಂದಿಗೆ ಕಡಿಮೆ ವೇತನ ನೀಡುತ್ತಿದೆ. ಇದರಿಂದ ವಿದೇಶಿ ಕಂಪನಿಗಳು ಹೆಚ್ಚಿನ ವೇತನ ನೀಡಿ ಕರೆದುಕೊಳ್ಳುವುದರಿಂದ ಸ್ಥಳೀಯ ಕಂಪನಿಗಳು ಪ್ರತಿಭಾನ್ವಿತರ ಕೊರತೆ ಎದುರಿಸಲಿದೆ ಎಂದು ಸಿಂಗಾಪುರದಲ್ಲಿ ಇತ್ತೀಚೆಗೆ ನಡೆದ ಎರಡು ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ಈ ಸಮ್ಮೇಳನದಲ್ಲಿ ಮಾತನಾಡಿದ ಎಸ್‍ಬಿಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಸಹ ಮಧ್ಯಮ ಪ್ರಮಾಣದ ಅಧಿಕಾರಿಗಳನ್ನು ಹೆಚ್ಚು ಸೆಳೆಯುವುದು ಹೆಚ್ಚು ಆತಂಕಕಾರಿ ಎಂದಿದ್ದಾರೆ.
ವಿದೇಶಿ ಕಂಪನಿಗಳು ಭಾರತದತ್ತ ಹೆಚ್ಚು ಮುಖ ಮಾಡಿವೆ. ಈ ವರ್ಷದಲ್ಲಿ ಇದುವರೆಗೂ ವಿದೇಶಿ ನೇರ ಹೂಡಿಕೆ ಆಕರ್ಷಣೆಯಲ್ಲಿ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
Advertisement