ಗುಜರಾತಿ ಬ್ರಾಹ್ಮಣರಿಗೂ ಬೇಕಂತೆ ಮೀಸಲಾತಿ!

ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರವೇಶವಾಕಾಶದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲು ನೀಡುವುದಾದರೆ, ನಮಗೂ ಆ ಸವಲತ್ತು ಕೊಡಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ವಡೋದರಾ: ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರವೇಶವಾಕಾಶದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲು ನೀಡುವುದಾದರೆ, ನಮಗೂ ಆ ಸವಲತ್ತು ಕೊಡಿ ಎಂದು 'ಅಖಿಲ ಗುಜರಾತ್ ಬ್ರಾಹ್ಮಣ ಸಮಾಜ' ಒತ್ತಾಯಿಸಿದೆ. ಈ ಬೇಡಿಕೆ ಈಡೇರಿಕೆಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲು ಸ್ಥಳೀಯ ಮಟ್ಟದ ಸಮಿತಿಗಳನ್ನು ರಚಿಸುವುದಾಗಿಯೂ ತಿಳಿಸಿದೆ.

ಅಂದಾಜಿನ ಪ್ರಕಾರ ಗುಜರಾತಿನ ಒಟ್ಟು ಜನಸಂಖ್ಯೆಯಲ್ಲಿ ಬ್ರಾಹ್ಮಣರ ಸಂಖ್ಯೆ ಸುಮಾರು 65 ಲಕ್ಷ. ಕೇವಲ ಪೌರೋಹಿತ್ಯ ಹಾಗೂ ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನೇ ನಂಬಿಕೊಂಡಿರುವ ಇವರಲ್ಲಿ 55 ಲಕ್ಷ ಜನ ಆರ್ಥಿಕವಾಗಿ ಹಿಂದುಳಿದವರು. ಜಾತಿ ಆಧಾರಿತ ಮೀಸಲು ವ್ಯವಸ್ಥೆಯಿಂದಾಗಿ ಪ್ರತಿಭೆಯಿದ್ದರೂ ಸರ್ಕಾರಿ ಹುದ್ದೆಗಳಿಂದ ಈ ಸಮುದಾಯದ ಯುವ ವರ್ಗ ವಂಚಿತವಾಗಿದೆ. ಅಲ್ಲದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಬ್ರಾಹ್ಮಣರಿಗೂ ಮೀಸಲಾತಿ ನೀಡಬೇಕು ಎಂದು ಅಖಿಲ ಗುಜರಾತ್ ಬ್ರಾಹ್ಮಣ ಸಮಾಜ ಆಗ್ರಹಿಸಿದೆ.

ಸಾಮಾಜಿಕ ಹಾಗೂ ಆರ್ಥಿಕ ಅಸಮತೋಲನಕ್ಕೆ ಎಡೆಮಾಡಿಕೊಡುತ್ತಿರುವ ಜಾತಿ ಆಧಾರಿತ ಮೀಸಲು ವ್ಯವಸ್ಥೆಯನ್ನೇ ಕಿತ್ತುಹಾಕಿ, ಎಲ್ಲ ಸಮುದಾಯಗಳಲ್ಲೂ ಬಡವರಿರುವ ಕಾರಣ 'ಆದಾಯ ಆಧಾರಿತ' ಮೀಸಲು ವ್ಯವಸ್ಥೆ ಜಾರಿಗೊಳಿಸುವಂತೆಯೂ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಎಜಿಬಿಎಸ್ ಒತ್ತಾಯಿಸಿದೆ.

ಅರ್ಚಕರಿಗೆ ಮಾಸಿಕ ವೇತನ:

ಅರ್ಚಕರಿಗೆ ನಿಗದಿತ ಮಾಸಿಕ ವೇತನವಿಲ್ಲದೇ ಭಕ್ತರು ಮಂಗಳಾರತಿ ಮತ್ತಿತರ ಸಮಯದಲ್ಲಿ ನೀಡುವ 'ದಕ್ಷಿಣೆ' ರೂಪದಲ್ಲಿನ ಬಿಡಿಗಾಸನ್ನೇ ನಂಬಿಕೊಂಡು ಜೀವನ ನಡೆಸುವ ಪರಿಸ್ಥಿತಿ ಇದೆ. ಹಾಗಾಗಿ ಗುಜರಾತಿನಾದ್ಯಂತ ಇರುವ ದೇವಾಲಯಗಳಲ್ಲಿ ಪೂಜೆ ಕೈಗೊಳ್ಳುತ್ತಿರುವ ಅರ್ಚಕರಿಗೆ ಮಾಸಿಕ ವೇತನ ನೀಡುವ ವ್ಯವಸ್ಥೆ ಜಾರಿಗೆ ತರಲು ಬೇಡಿಕೆಯಿಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com