ಪಟನಾ: ಬಿಹಾರ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದಂತೆ, ಪಟನಾ ವಿಮಾನ ನಿಲ್ದಾಣದ ಅಧಿಕಾರಿಗಳು ದಂಗಾಗುತ್ತಿದ್ದಾರೆ.
ಇದಕ್ಕೆ ಕಾರಣ ವಿಮಾನ ನಿಲ್ದಾಣದಲ್ಲಿ ಉಂಟಾಗಿರುವ ನೂಕು ನುಗ್ಗಲು. ಇಲ್ಲಿಂದ ಸಂಚರಿಸುವ 20 ವಿಮಾನಗಳಲ್ಲದೇ, ವಿವಿಧ ರಾಜಕೀಯ ಪಕ್ಷಗಳು ಬಳಸುತ್ತಿರುವ ಹೆಲಿಕಾಪ್ಟರ್‍ಗಳೂ ಇಲ್ಲಿನ ಆಗಸವನ್ನು ಆಳಲಾರಂಭಿಸಿವೆ. ಪ್ರಚಾರಕ್ಕೆಂದು 18 ಕಾಪ್ಟ ರ್ಗಳು, 3 ಫಿಕ್ಸೆಡ್ ವಿಂಗ್ ವಿಮಾನಗಳನ್ನು ಬಳಸಲಾಗುತ್ತಿದೆ.
ಬಿಜೆಪಿ 7 ಕಾಪ್ಟರ್ಗಳು, ಎಲ್ಜೆಪಿ, ಆರ್ಎಲ್ಎಸ್ಪಿ ತಲಾ ಒಂದು, ಜೆಡಿಯು, ಕಾಂಗ್ರೆಸ್ ಮತ್ತು ಆರ್ಜೆಡಿ ತಲಾ ಎರಡೆರಡು ಕಾಪ್ಟರ್ಗಳನ್ನು ಬಾಡಿಗೆಗೆ ಪಡೆದಿವೆ. ಏರ್ಪೋರ್ಟ್‍ನ ಪ್ರದೇಶವು ಕಿರಿದಾಗಿದೆ. ಹೀಗಿರುವಾಗ ಇಷ್ಟೊಂದು ಕಾಪ್ಟರ್, ವಿಮಾನಗಳನ್ನು ಹೇಗೆ ನಿರ್ವಹಿಸುವುದು ಎಂಬ ತಲೆನೋವು ಅಧಿಕಾರಿಗಳದ್ದು.
ಲಾಲು ವಿರುದ್ಧ ತಂತ್ರ: ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ ಎಂಬ ಲಾಲು ಹೇಳಿ ಕೆಯನ್ನು ಅವರಿಗೇ ತಿರುಗುಬಾಣವಾಗಿ ಬಳಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಿದ್ಧತೆ ನಡೆಸುತ್ತಿದ್ದಾರೆ. ಈ ಮೂಲಕ ಮೀಸಲಾತಿ ವಿವಾದವನ್ನು ಜನರ ಮನಸ್ಸಿನಿಂದ ದೂರ ಮಾಡುವುದು ಬಿಜೆಪಿಯ ತಂತ್ರ. ಇದೇ ವೇಳೆ, ಬಿಹಾರದಲ್ಲಿ ಅಸಾದುದ್ದೀನ್ ಒವೈಸಿ ಅವರು ನಮಗೆ ಲಾಲುಗಿಂತ ದೊಡ್ಡ ಪ್ರತಿ ಸ್ಪರ್ಧಿ ಎಂದಿದ್ದಾರೆ ಅಮಿತ್ ಶಾ.