ಛತ್ತೀಸ್ ಗಡ್: ಕಾಫಿರ್ ಎಂದು ನಿಂದಿಸಿದಕ್ಕೆ ಮನನೊಂದು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್)ದ ಅಲ್ಪಸಂಖ್ಯಾತರ ರಾಷ್ಟ್ರೀಯ ಮುಸ್ಲಿಂ ಮಂಚ್(ಆರ್ಎಮ್ಎಮ್) ಘಟಕದ ಮುಖಂಡ ಡಾ. ಹಬೀಬ್ ಹನೀಫ್ ಚೌಧರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇತ್ತೀಚೆಗಷ್ಟೇ ದೇಶದಲ್ಲಿ ಗೋಹತ್ಯೆ ನಿಷೇಧ ವಿವಾದ ಬುಗಿಲೇದಿತ್ತು. ಈ ವೇಳೆ ಗೋಪೂಜೆಗೆ ಬೆಂಬಲ ಹಾಗೂ ಗೋಹತ್ಯೆ ವಿರುದ್ಧ ಹಬೀಬ್ ಹನೀಫ್ ಚೌಧರಿ ಧ್ವನಿ ಎತ್ತಿದ್ದರು. ಇದನ್ನೇ ಪ್ರಮುಖ ದಾಳವಾಗಿಸಿಕೊಂಡಿದ್ದ ಕೆಲ ಮುಸ್ಲಿಂ ಮೂಲಭೂತವಾದಿಗಳು ಹನೀಫ್ ಚೌಧರಿಯನ್ನು ಕಾಫಿರ್(ಮುಸ್ಲಿಮೇತರ ವ್ಯಕ್ತಿ) ಎಂದು ನಿಂದಿಸಿದ್ದರು. ಇದರಿಂದ ಮನನೊಂದ ಹನೀಫ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಬೀಬ್ ಹನೀಫ್ ಚೌಧರಿ ಅವರು ಬಹಳ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಜ್ ಸಮಿತಿ ಅಧ್ಯಕ್ಷ ಡಾ. ಸಲೀಂ ರಾಜ್ ಸ್ಪಷ್ಟಪಡಿಸಿದ್ದಾರೆ. ಹನೀಫ್ ಚೌಧರಿ ಸಾವು ಕುರಿತಂತೆ ಅವರ ಕುಟುಂಬವರ್ಗ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ.