ಹಾರ್ದಿಕ್ ಜೊತೆ ಫೋಟೋ ತೆಗೆಸಿಕೊಂಡು ಅಮಾನತಾದ ಇಬ್ಬರು ಪೊಲೀಸರು

ಪಟೇಲ್ ಸಮುದಾಯದ ಹೋರಾಟ ಹಾರ್ದಿಕ್ ಪಟೇಲ್ ಜೊತೆ ಫೋಟೋ ತೆಗೆಸಿಕೊಂಡ ಕಾರಣ ಪೊಲೀಸ್ ಪೇದೆಗಳನ್ನು ಅಮಾನತಾಗಿರುವ ಘಟನೆಯೊಂದು ಗುಜರಾತ್ ನಲ್ಲಿ ಮಂಗಳವಾರ ನಡೆದಿದೆ...
ಪಟೇಲ್ ಸಮುದಾಯದ ಹೋರಾಟ ಹಾರ್ದಿಕ್ ಪಟೇಲ್ (ಸಂಗ್ರಹ ಚಿತ್ರ)
ಪಟೇಲ್ ಸಮುದಾಯದ ಹೋರಾಟ ಹಾರ್ದಿಕ್ ಪಟೇಲ್ (ಸಂಗ್ರಹ ಚಿತ್ರ)

ಅಹ್ಮದಾಬಾದ್: ಪಟೇಲ್ ಸಮುದಾಯದ ಹೋರಾಟ ಹಾರ್ದಿಕ್ ಪಟೇಲ್ ಜೊತೆ ಫೋಟೋ ತೆಗೆಸಿಕೊಂಡ ಕಾರಣ ಪೊಲೀಸ್ ಪೇದೆಗಳನ್ನು ಅಮಾನತಾಗಿರುವ ಘಟನೆಯೊಂದು ಗುಜರಾತ್ ನಲ್ಲಿ ಮಂಗಳವಾರ ನಡೆದಿದೆ.

ಮಹೇಂದ್ರಸಿನ್ಹ್ ಜವನ್ ಸಿನ್ಹ್ ಮತ್ತು ಅರುಣ್ ದಾಲೆ ಅಮಾನತಾದವರಾಗಿದ್ದು ಇವರು ಅಪರಾಧ ವಿಭಾಗದಲ್ಲಿ ಪೇದೆಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಹಾರ್ದಿಕ್ ಜೊತೆ ಇಬ್ಬರು ಪೇದೆಗಳು ಫೋಟೋವೊಂದನ್ನು ತೆಗೆಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್ ಅಪ್ ಗಳನ್ನು ಹರಿದಾಡಿದೆ. ಈ ಕುರಿತಾದ ಮಾಹಿತಿ ತಿಳಿದ ಹಿರಿಯ ಅಧಿಕಾರಿಗಳು ಈ ಇಬ್ಬರು ಪೇದೆಗಳನ್ನು ಇಂದು ಅಮಾನತು ಮಾಡಿದ್ದಾರೆಂದು ತಿಳಿದುಬಂದಿದೆ.

ಈ ಕುರಿತಂತೆ ಮಾತನಾಡಿರುವ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ದೀಪನ್ ಭದ್ರನ್ ಅವರು, ಒಬ್ಬ ಆರೋಪಿಯೊಂದಿಗೆ ವಿಚಾರಣೆ ವೇಳೆ ಫೋಟೋ ತೆಗೆಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ, ಇಬ್ಬರು ಪೇದೆಗಳು ಆರೋಪಿಯೊಂದಿಗೆ ಫೋಟೋ ತೆಗೆಸಿಕೊಂಡಿರುವ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರೂ ಪೇದೆಗಳ ತಪ್ಪಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com