
ಕರಾಚಿ: ಭಾರತದ ಬಾಲಕಿ ಗೀತಾಳನ್ನು ಈವರೆಗೆ ನೋಡಿಕೊಂಡಿದ್ದ ಪಾಕಿಸ್ತಾನದ ಎನ್ ಜಿಒ ಇಧಿ ಫೌಂಡೇಷನ್ ಪ್ರಧಾನಿ ಮೋದಿ ಅವರ ರು.1 ಕೋಟಿಯ ಕೊಡುಗೆಯನ್ನು ನಿರಾಕರಿಸಿದೆ. ಇಧಿ ಫೌಂಡೇಶನ್‍ನ ಅಬ್ದುಲ್ ಸತ್ತಾರ್ ಇಧಿ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಆದರೆ ರು.1 ಕೋಟಿಯ ಕೊಡುಗೆ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಮಂಗಳವಾರ ಕರಾಚಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಇಧಿ ಅವರ ಪುತ್ರ ಫೈಸಲ್ ಇಧಿ, ನಮ್ಮ ನಿಯಮದಂತೆ ನಾವು ಪಾಕಿಸ್ತಾನ ಸರ್ಕಾರ ಸೇರಿದಂತೆ ಯಾವುದೇ ಸರ್ಕಾರದಿಂದ ಹಣ ಸಹಾಯವನ್ನು ಪಡೆಯುವುದಿಲ್ಲ.
ಹೀಗಾಗಿ ಭಾರತದ ಪ್ರಧಾನಿ ನೆರವನ್ನೂ ನಿರಾಕರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸೋಮವಾರವಷ್ಟೇ ಗೀತಾಳನ್ನು ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ,ಇದುವರೆಗೆ ಆಕೆಯನ್ನು ನೋಡಿಕೊಂಡಿದ್ದ ಇಧಿ ಅವರ ಪತ್ನಿ ಬಾಲ್ಖಿಸ್ ಬಾನೋ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಅಲ್ಲದೆ ಇಂಥ ಒಳ್ಲೆಯ ಕೆಲಸ ಮಾಡುತ್ತಿರುವ ಇಧಿ ಫೌಂಡೇಶನ್ ಗೆ ನೆರವಿನ ಹಸ್ತವಾಗಿ ರು.1 ಕೋಟಿ ಕೊಡುವುದಾಗಿ ಘೋಷಿಸಿದ್ದರು. ಇದೇ ವೇಳೆ, ಮಂಗಳವಾರ ಗೀತಾ ಇಂದೋರ್ ಗೆ ಪ್ರಯಾಣ ಬೆಳೆಸಿದ್ದಾಳೆ. ಸದ್ಯಕ್ಕೆ ಆಕೆ ಅಲ್ಲೇ ಇರಲಿದ್ದಾಳೆ.
Advertisement