ಬೇಳೆ ದಾಸ್ತಾನು ನಿಷೇಧಿಸಿದ್ದಕ್ಕೆ ಅಮೆರಿಕ ಸಿಡಿಮಿಡಿ

ಭಾರತದಲ್ಲಿ ಬೇಳೆ ಕಾಳು ದರಗಳು ವಿಪರೀತವಾಗಿ ಏರಿಕೆ ಕಂಡಿದ್ದು ಅದನ್ನು ನಿಯಂತ್ರಿಸುವ ಉದ್ದೇಶದಿಂದ ಬೇಳೆ ದಾಸ್ತಾನು ನಿಷೇಧಿಸಲಾಗಿತ್ತು. ಈ ಕ್ರಮ ವಾಣಿಜ್ಯ ಒಪ್ಪಂದಗಳನ್ನು ಉಲ್ಲಂಘಿಸಿದಂತಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ವಾಷಿಂಗ್ಟನ್: ಭಾರತದಲ್ಲಿ ಬೇಳೆ ಕಾಳು ದರಗಳು ವಿಪರೀತವಾಗಿ ಏರಿಕೆ ಕಂಡಿದ್ದು ಅದನ್ನು ನಿಯಂತ್ರಿಸುವ ಉದ್ದೇಶದಿಂದ ಬೇಳೆ ದಾಸ್ತಾನು ನಿಷೇಧಿಸಲಾಗಿತ್ತು. ಈ ಕ್ರಮ ವಾಣಿಜ್ಯ ಒಪ್ಪಂದಗಳನ್ನು ಉಲ್ಲಂಘಿಸಿದಂತಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಇಲ್ಲಿನ ನಡೆಯುತ್ತಿರುವ ಭಾರತ-ಅಮೆರಿಕ ವಾಣಿಜ್ಯ ನೀತಿ ವೇದಿಕೆ ಸಭೆಯಲ್ಲಿ ಅಮೆರಿಕದ ಪ್ರತಿನಿಧಿಗಳು ಈ ವಿಷಯವನ್ನು ಎತ್ತಿದರು. ದಾಸ್ತಾನು ಮಾಡಬಾರದೆಂದು ಭಾರತ ಆದೇಶ ಹೊರಡಿಸಿದ್ದರಿಂದ ಆ ದೇಶಕ್ಕೆ ರಫ್ತು ಮಾಡಲು ಸಾಧ್ಯವಾಗಿಲ್ಲ. ಇದು ವಾಣಿಜ್ಯ ಒಪ್ಪಂದದ ಉಲ್ಲಂಘನೆ ಎಂದಿದ್ದರು.

ಇದಕ್ಕೆ ಉತ್ತರಿಸಿದ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಭಾರತದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಬೇಳೆ ಕಾಳು ದರಗಳು ಭಾರಿ ಪ್ರಮಾಣದಲ್ಲಿ ಏರಿತ್ತು. ಕೇಂದ್ರ ಆಹಾರ ಸಚಿವಾಲಯ  ಗೋಡೋನ್‍ಗಳ ಮೇಲೆ ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com