
ಪುಣೆ: ಮಾತು ಕೇಳದೆ ಜೀನ್ಸ್, ಟಿ ಶರ್ಟ್ ಹಾಕಿದ್ದಾಳೆಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆಯೊಂದು ಪುಣೆಯ ಗುಲ್ತೆಕಡಿ ಪ್ರದೇಶದಲ್ಲಿ ಶನಿವಾರ ನಡೆದಿದೆ.
ರಂಜಿತ್ ನಿಶಾದ್ (24) ಹತ್ಯೆ ಮಾಡಿದ ಆರೋಪಿಯಾಗಿದ್ದು, ಕೆಲವು ದಿನಗಳ ಹಿಂದಷ್ಟೇ ರಂಜಿತ್ ನಿಶಾದ್ ತನ್ನ ಪೂಜಾ ಜೀನ್ ಪ್ಯಾಂಟ್ ಹಾಗೂ ಟಿ ಶರ್ಟ್ ಧರಿಸುವುದನ್ನು ವಿರೋಧಿಸಿದ್ದ. ಇದರ ನಡುವೆಯೂ ಪೂಜಾ ಜೀನ್ಸ್ ಧರಿಸಿರುವುದನ್ನು ಕಂಡ ರಂಜಿತ್ ಕೋಪಗೊಂಡು ಪೂಜಾಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ನಂತರ ಮನೆಗೆ ಬೀಗ ಹಾಕಿ ಸ್ಥಳದಿಂದ ಕಾಲ್ಕಿತ್ತಿದ್ದಾನೆಂದು ತಿಳಿದುಬಂದಿದೆ.
ಪಕ್ಕದ ಮನೆಯಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ರಂಜಿತ್ ನಿಶಾದ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ.
Advertisement