

ನವದೆಹಲಿ: ಸನ್ನಿ ಲಿಯೋನ್ ನಟಿಸಿರುವ ಕಾಂಡೋಮ್ ಜಾಹಿರಾತಿನಿಂದ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಹೇಳಿ ವಿವಾದ ಎಬ್ಬಿಸಿದ್ದ ಸಿಪಿಐ ಮುಖಂಡ ಅತುಲ್ ಕುಮಾರ್ ಅಂಜನ್ ಕುಮಾರ್ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.ಆದರೆ ಅಂತಹ ಜಾಹಿರಾತಿಗೆ ತಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ಎಎನ್ ಐ ಸುದ್ದಿ ಸಂಸ್ಥೆಗೆ ಮಾತನಾಡಿದ ಅವರು, ತಾವು ಕಾಂಡೋಮ್ ಬಳಕೆ ವಿರೋಧಿಯಲ್ಲ. ಆದರೆ ಕಾಂಡೋಮ್ ಪ್ರಚಾರಕ್ಕೆ ಜಾಹಿರಾತಿನಲ್ಲಿ ಬಳಸಿದ ಭಾಷೆ ಸರಿಯಾಗಿಲ್ಲ. ಸನ್ನಿ ಲಿಯೋನ್ ಳ ಜಾಹಿರಾತು ಕೆಟ್ಟದಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಜಾಹಿರಾತು ಪ್ರಸಾರಕ್ಕೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿದರು.
ನಟಿ ಸನ್ನಿ ಲಿಯೋನ್ ಕೆಟ್ಟದ್ದನ್ನು ತೋರಿಸುತ್ತಿದ್ದು, ಆಕೆಯ ಬೆಂಬಲಿಗರು ತಮ್ಮ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅತುಲ್ ಅಂಜನ್ ಕುಮಾರ್ ಹೇಳಿದರು.