ಜಮ್ಮು-ಕಾಶ್ಮೀರ: ಭಾರತದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ.
ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಬಂಡೀಪೋರಾ ಪ್ರದೇಶದ ಬಳಿ ಭಯೋತ್ಪಾದಕರ ತಂಡವೊಂದು ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿತ್ತು. ಈ ವೇಳೆ ಭಯೋತ್ಪಾದಕರ ವಿರುದ್ಧ ಗುಂಡಿನ ಚಕಮಕಿ ನಡೆಸಿದ ಬಿಎಸ್ಎಫ್ ಪಡೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ.
ಉಗ್ರರು, ಸೇನಾಪಡೆಯ ನಡುವೆ ಭಾರಿ ಗುಂಡಿನ ಚಕಮಕಿ ನಡೆಯುತ್ತಿದ್ದು, ಇನ್ನಷ್ಟು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಭಾರತೀಯ ಯೋಧರು ಶೋಧಕಾರ್ಯ ನಡೆಸುತ್ತಿದ್ದಾರೆ.
ಭಾರತೀಯ ಯೋಧರ ಗುಂಡೇಟಿಗೆ ಬಲಿಯಾದ ಇಬ್ಬರು ಭಯೋತ್ಪಾದಕರ ಬಳಿಯಿದ್ದ 2 ಎಕೆ 47 ಗನ್ ಗಳು ವಶ ಪಡಿಸಿಕೊಳ್ಳಲಾಗಿದೆ.