

ನವದೆಹಲಿ: ಮಾನವ ರಹಿತ ವಿಮಾನ ಹೊಂದಲು ಭಾರತ ಕಳೆದ ಮೂರು ವರ್ಷದ ಹಿಂದೆಯೇ ಇಸ್ರೇಲ್ ನ್ನು ಕೇಳಿತ್ತು. ಕಳೆದ ಜನವರಿಯಲ್ಲಿ ಡ್ರೋಣ್ ಪೂರೈಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಸೇನೆ ಪತ್ರ ಬರೆದಿದೆ. ಈಗಾಗಲೇ ಪಾಕಿಸ್ತಾನ ಹಾಗೂ ಚೀನಾ ಡ್ರೋಣ್ ಸೌಲಭ್ಯವನ್ನು ಹೊಂದಿವೆ.
ಮಾನವ ರಹಿತ ವಿಮಾನ ಇದಾಗಿದ್ದು, ಇದರಲ್ಲಿ ಯಾವುದೇ ಪ್ರಾಣಾಪಾಯವಿಲ್ಲದೇ ಶಸ್ತ್ರಗಳನ್ನು ಇರಿಸಿ, ಶತ್ರು ಪಡೆಗಳ ಮೇಲೆ ದಾಳಿ ನಡೆಸಬಹುದಾಗಿದೆ.
ಪಾಕಿಸ್ತಾನ ತನ್ನದೇ ದೇಶದಲ್ಲಿ ಡ್ರೋನ್ ತಯಾರಿಸಿ, ಉಗ್ರರ ವಿರುದ್ಧ ದಾಳಿ ನಡೆಸುತ್ತಿದ್ದು, ಕಾಶ್ಮೀರದಲ್ಲೂ ಪಾಕ್ ಡ್ರೋಣ್ ಮೂಲಕ ದಾಳಿ ನಡೆಸುವ ಭೀತಿ ಎದುರಾಗಿದೆ. ಕಳೆದ ಮೂರು ವರ್ಷಗಳ ಹಿಂದೆಯೇ ಭಾರತ ಇಸ್ರೇಲ್‍ಗೆ ಡ್ರೋಣ್ ಪೂರೈಸುವಂತೆ ಕೇಳಿಕೊಂಡಿತ್ತು. ಆದರೆ ಜನವರಿಯಲ್ಲಿ ಸೇನೆ ಡ್ರೋಣ್‍ನ ಶೀಘ್ರ ಪೂರೈಕೆಗೆ ಬೇಡಿಕೆ ಇಟ್ಟಿದೆ. ಈಗಾಗಲೇ ಭಾರತ ಮಾನವ ರಹಿತ ವಿಮಾನವನ್ನು ಕಾಶ್ಮೀರ ಗಡಿಭಾಗ ಹಾಗೂ ಚೀನಾ ಗಡಿಭಾಗಗಳಲ್ಲಿ ಹಾರಾಟ ನಡೆಸುತ್ತಿದೆ.
10 ಮಾನವ ರಹಿತ ವಿಮಾನಗಳ ಪೂರೈಕೆಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ ಡ್ರೋಣ್ ಪೂರೈಕೆ ಸಂಬಂಧ ಇಸ್ರೇಲ್‍ನೊಂದಿ ಒಡಂಬಡಿಕೆಗೂ ಸಹಿಯಾಗಿದೆ.