ರೈಲಿನಲ್ಲಿ ಅತ್ಯಾಚಾರಕ್ಕೆ ಯತ್ನ: ಹಸುಗೂಸಿನೊಂದಿಗೆ ಹೊರ ಜಿಗಿದ ದಂಪತಿ

ಯುವಕರ ಗುಂಪೊಂದು ರೈಲಿನಲ್ಲಿ ಗೃಹಿಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ 10 ತಿಂಗಳ ಹಸುಗೂಸಿನೊಂದಿಗೆ ದಂಪತಿಗಳು ಚಲಿಸುತ್ತಿದ್ದ ರೈಲಿನಿಂದ...
ದೌರ್ಜನ್ಯ
ದೌರ್ಜನ್ಯ
ಅಲಿಪುರ್ದುರ್: ಯುವಕರ ಗುಂಪೊಂದು ರೈಲಿನಲ್ಲಿ ಗೃಹಿಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ 10 ತಿಂಗಳ ಹಸುಗೂಸಿನೊಂದಿಗೆ ದಂಪತಿಗಳು ಚಲಿಸುತ್ತಿದ್ದ ರೈಲಿನಿಂದ ಹೊರ ಜಿಗಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಲಿಪುರ್ದುರ್ ನಲ್ಲಿ ನಡೆಸಿದೆ.
ಮಹಾನಂದಾ ಎಕ್ಸ್ ಪ್ರೆಸ್ ರೈಲಿನಲ್ಲಿ 32 ವರ್ಷದ ಅಶಾಭುಲ್ ಹಾಗೂ 25 ವರ್ಷದ ಮಡದಿ ಹಾಗೂ 10 ತಿಂಗಳ ಹೆಣ್ಣು ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ 10 ರಿಂದ 12 ಮಂದಿಯ ಗುಂಪೊಂದು ಕುಡಿದು ಅಶಾಭೂಲ್ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬಲವಂತವಾಗಿ ಆಕೆಯನ್ನು ಅತ್ಯಾಚರಿಸಲು ಮುಂದಾದಾಗ ದಂಪತಿಗಳು ಧಿಮಾ ನಿಲ್ದಾಣದ ಬಳಿ ರೈಲಿನಿಂದ ಹೊರಕ್ಕೆ ಜಿಗಿದ್ದಾರೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿಗಳು ಧಿಮಾ ನಿಲ್ದಾಣದ ಅರಣ್ಯದಲ್ಲಿ ಬಿದ್ದಿರುವುದನ್ನು ಕಂಡ ರೈಲ್ವೇ ಪೊಲೀಸರು ಕೂಡಲೇ ಅವರನ್ನು ಅಲಿಪುರ್ದುರ್ ರೈಲ್ವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆ ಕುರಿತಂತೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com