ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

80 ನಕ್ಸಲರು ಒಡಿಸ್ಸಾ ಪೊಲೀಸರಿಗೆ ಶರಣು

80 ಮಾವೋವಾದಿಗಳು ಒಡಿಸ್ಸಾ ಪೊಲೀಸರಿಗೆ ಶರಣಾಗಿದ್ದಾರೆ. ಈ 80 ನಕ್ಸಲರು ಸಹಾನುಭೂತಿ ಆಧಾರದ ಮೇಲೆ ಒಡಿಸ್ಸಾದ ಮಾಲ್ಕನಗಿರಿ ಜಿಲ್ಲೆಯಲ್ಲಿ ...

ಭುವನೇಶ್ವರ: 80 ಮಾವೋವಾದಿಗಳು ಒಡಿಸ್ಸಾ ಪೊಲೀಸರಿಗೆ ಶರಣಾಗಿದ್ದಾರೆ. ಈ 80 ನಕ್ಸಲರು ಸಹಾನುಭೂತಿ ಆಧಾರದ ಮೇಲೆ ಒಡಿಸ್ಸಾದ ಮಾಲ್ಕನಗಿರಿ  ಜಿಲ್ಲೆಯಲ್ಲಿ ಶರಣಾಗಿದ್ದಾರೆ.

ಶರಣಾದ ಎಲ್ಲಾ ನಕ್ಸಲರು ಮತ್ತವರ ಬೆಂಬಲಿಗರು ಒಡಿಸ್ಸಾದ ಬದಲಿಗುಡ ಗ್ರಾಮದವರು ಎಂದು ಮಾಲ್ಕನಗಿರಿ ಎಸ್ ಪಿ ಮಿತ್ರಬಾನು ತಿಳಿಸಿದ್ದಾರೆ. ಕಳೆದ ತಿಂಗಳು ಸುಮಾರು 800 ಕ್ಕೂ ಹೆಚ್ಚು ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದರು.

ಶರಣಾಗತಿ ಬಯಸಿದ್ದ ನಕ್ಸಲರು ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ತಮ್ಮ ವಿರುದ್ಧ ಅನವಶ್ಯಕ ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಜೊತೆಗೆ ಶರಣಾಗುತವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.


Related Stories

No stories found.

Advertisement

X
Kannada Prabha
www.kannadaprabha.com