ಪಾಟ್ನಾ: ಬಡವರಿಗೆ ಮೀಸಲಾತಿ ನೀಡಿ ಎಂಬ ಹೋರಾಟ ನಾನು ನಿಲ್ಲಿಸುವುದಿಲ್ಲ. ನನ್ನನ್ನು ಗಲ್ಲಿಗೇರಿಸಿದರೂ ಸರಿ, ಹೋರಾಟ ಕೈ ಬಿಡುವುದಿಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ನಾನು ನನ್ನ ಪಕ್ಷ ಬಡವರಿಗೆ ಮೀಸಲಾತಿ ನೀಡುವಂತೆ ಹೋರಾಟ ಮಾಡುತ್ತಲೇ ಇರುತ್ತೇವೆ. ನನ್ನನ್ನು ಗಲ್ಲಿಗೇರಿಸಿದರೂ ನಾನು ಅಂಜುವುದಿಲ್ಲ. ಹಿಂದುಳಿದವರಿಗೆ ಮೀಸಲಾತಿ ನೀಡುವ ಬಗ್ಗೆ ಪ್ರಧಾನಿಯವರು ವಿಶ್ವಸಂಸ್ಥೆಗೆ ನನ್ನ ವಿರುದ್ಧ ಅರ್ಜಿ ಸಲ್ಲಿಸಿದರೂ ನಾನು ಅದಕ್ಕೆ ಹೆದರುವುದಿಲ್ಲ.
ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಅವರ ಸಂಘಟನೆಗಳು ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡುವುದಕ್ಕೆ ತಡೆಯೊಡ್ಡುತ್ತಿದೆ ಎಂದು ಲಾಲೂ ಹೇಳಿದ್ದಾರೆ.
ಅದೇ ವೇಳೆ ಮೀಸಲಾತಿಗೆ ತಡೆಯೊಡ್ಡುತ್ತಿರುವ ಭಾಗವತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಲಾಲೂ ಕುಹಕವಾಡಿದ್ದಾರೆ.