ಪುನರ್ ವಿವಾಹವಾದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಮಾವ

ಗೂಗಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸುಂದರ್‌ ಪಿಚೈ ಅವರ ಮಾವ...
ಮರು ಮದುವೆಯಾದ  ಓಲಾರಾಮ್‌ ಹರ್ಯಾನಿ ಮತ್ತು ಮಾಧುರಿ ಶರ್ಮ, ಬಲ ಚಿತ್ರದಲ್ಲಿ ಸುಂದರ್ ಪಿಚ್ಚೈ
ಮರು ಮದುವೆಯಾದ ಓಲಾರಾಮ್‌ ಹರ್ಯಾನಿ ಮತ್ತು ಮಾಧುರಿ ಶರ್ಮ, ಬಲ ಚಿತ್ರದಲ್ಲಿ ಸುಂದರ್ ಪಿಚ್ಚೈ

ಕೋಟಾ(ರಾಜಸ್ತಾನ): ಗೂಗಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್‌ ಪಿಚೈ ಅವರ ಮಾವ  ಓಲಾರಾಮ್‌ ಹರ್ಯಾನಿ ಅವರು ತಮ್ಮ 70ರ ಹರೆಯದಲ್ಲಿ  ಪುನರ್‌ ವಿವಾಹವಾಗಿದ್ದಾರೆ.

ರಾಜಸ್ತಾನದ ಕೋಟಾ ಜಿಲ್ಲೆಯ 65 ವರ್ಷದ ಮಾಧುರಿ ಶರ್ಮ ಎಂಬುವವರನ್ನು ವಿದುರನಾಗಿದ್ದ ಓಲಾರಾಂ ಅವರು ಮದುವೆಯಾಗಿದ್ದಾರೆ. ಮಾಧುರಿ ಶರ್ಮಾ ಅವರು ಕೂಡ ವಿಧವೆಯಾಗಿದ್ದರು. ಓಲಾರಾಂ ಮತ್ತು ಮಾಧುರಿ ಅವರ  ಪುನರ್‌ ವಿವಾಹ ಆರ್ಯ ಸಮಾಜದ ಸಂಪ್ರದಾಯದ ಪ್ರಕಾರ ನೆರವೇರಿತು.

ಓಲಾರಾಮ್ ಅವರು ಕೋಟಾದಲ್ಲಿನ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ನಿವೃತ್ತ ಸಿಬಂದಿಯಾಗಿದ್ದು, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಅವರ ಇಬ್ಬರು ಮಕ್ಕಳು ಸಹ ವಿದೇಶದಲ್ಲಿ ನೆಲೆಸಿದ್ದಾರೆ. ಅವರ ಪುತ್ರಿ ಅಂಜಲಿ ಸುಂದರ್ ಪಿಚೈ ಅವರ ಪತ್ನಿ. 

ವಿವಾಹ ವಿಧಿ ವಿಧಾನ ನೆರವೇರಿದ ಬಳಿಕ ಮಾತನಾಡಿದ ಓಲಾರಾಂ, ಪ್ರತಿಯೊಬ್ಬ ವ್ಯಕ್ತಿಗೂ ಆತನ ಆಸೆ, ಆಕಾಂಕ್ಷೆಗಳ ಪ್ರಕಾರ ಮುಕ್ತವಾಗಿ ಬದುಕು ನಡೆಸುವ ಹಕ್ಕು ಇದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com