ಪಬ್ ನಲ್ಲಿ ಮದ್ಯ ಸೇವಿಸಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದ ಅಪ್ರಾಪ್ತರು

ಅಪ್ರಾಪ್ತರಿಗೆ ಮದ್ಯ ಪೂರೈಕೆ ಮಾಡಿದ ಹಿನ್ನಲೆಯಲ್ಲಿ ಸ್ಥಳೀಯ ಪಬ್ ಗೆ ಅಬಕಾರಿ ಇಲಾಖೆ ದಂಡ...
ಮದ್ಯಪಾನ ಆರೋಗ್ಯಕ್ಕೆ ಹಾನಿಕರ
ಮದ್ಯಪಾನ ಆರೋಗ್ಯಕ್ಕೆ ಹಾನಿಕರ
ಗುರ್ ಗಾಂವ್: ಅಪ್ರಾಪ್ತರಿಗೆ ಮದ್ಯ ಪೂರೈಕೆ ಮಾಡಿದ ಹಿನ್ನಲೆಯಲ್ಲಿ ಸ್ಥಳೀಯ ಪಬ್ ಗೆ ಅಬಕಾರಿ ಇಲಾಖೆ ದಂಡ ವಿಧಿಸಿದೆ. 
ಅಬಕಾರಿ ಇಲಾಕೆ ಮತ್ತು ಗುರ್ ಗಾಂವ್ ಪೊಲೀಸರು ಇಲ್ಲಿನ ಸ್ಥಳೀಯ ಪಬ್ ಮೇಲೆ ದಾಳಿ ನಡೆಸಿದ ವೇಳೆ, 30ಕ್ಕೂ ಹೆಚ್ಚು ಅಪ್ರಾಪ್ತರು ಪಬ್ ನಲ್ಲಿದ್ದು ಮದ್ಯ ಸೇವಿಸುತ್ತಿದ್ದರು. ಐವರು ಹುಡುಗಿಯರು ಸೇರಿದಂತೆ 30 ಅಪ್ರಾಪ್ತರು ಈ ಪಬ್ ನಲ್ಲಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. 
ಪಬ್ ಹೊರಗಡಿಯಿಂದ ಬೀಗ ಹಾಕಲಾಗಿತ್ತು. ಆದರೆ, ಪಬ್ ನೊಳಗೆ 30ಕ್ಕೂ ಹೆಚ್ಚು ಅಪ್ರಾಪ್ತರು ಇದ್ದರು. ಪೊಲೀಸರು ಬಾಗಿಲು ತೆಗೆಯುವಂತೆ ಗದರಿದಾಗ ಪಬ್ ಸಿಬ್ಬಂದಿಗಳು ಬಾಗಿಲು ತೆರಿದಿದ್ದಾರೆ. ಈ ವೇಳೆ ಅಪ್ರಾಪ್ತರು ಮದ್ಯ ಸೇವಿಸಿ ಪ್ರಜ್ಞಾ ಹೀನಾರಾಗಿದ್ದ ದೃಶ್ಯ ಕಂಡು ಬಂದಿದೆ. 
ಪಬ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಪಬ್ ಮ್ಯಾನೇಜರ್ ನ ಬಂಧಿಸಲಾಗಿದೆ. ಪಬ್ ಮಾಲೀಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com