ಅಮಲ್ ಅಗಸ್ಟಿನ್ ಗೆ ವಿವಿಧ ಹೆಸರಿನಲ್ಲಿ ಡೊಮೈನ್ ನೇಮ್ ನೋಂದಣಿ ಮಾಡುವುದೇ ಒಂದು ಹವ್ಯಾಸವಾಗಿತ್ತು. ಇದೇ ಹವ್ಯಾಸ ಇದೀಗ ಆತನನ್ನು ವಿಶ್ವವೇ ಗುರುತಿಸುವಂತೆ ಮಾಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಗೆ ಮಗಳು ಹುಟ್ಟಿದ್ದಳು. ಮಗಳಿಗೆ ಮ್ಯಾಕ್ಸಿಂ ಚಾನ್ ಜುಕರ್‌ಬರ್ಗ್ ಎಂದು ಹೆಸರಿಡುವುದಾಗಿ ಪ್ರಕಟಿಸಿದ್ದೇ ತಡ, ಅಮಲ್ ಈ ಹೆಸರಿನಲ್ಲೊಂದು ಡೊಮೈನ್ ನೇಮ್ ನೋಂದಣಿ ಮಾಡಿ ಬಿಟ್ಟಿದ್ದ.