ಕೊನೆಗೂ 'ಸೀರಿಯಲ್ ಡಾಗ್ ಕಿಲ್ಲರ್' ಬಂಧನ

ಬೀದಿಗಳಲ್ಲಿ ಸಿಗುವ ನಾಯಿಗಳನ್ನು ಕೊಂದು ವಿಕೃತ ಆನಂದ ಅನುಭವಿಸುತ್ತಿದ್ದ 'ಸೀರಿಯಲ್ ಡಾಗ್ ಕಿಲ್ಲರ್'ನಿಂದಾಗಿ ದೆಹಲಿಯ ಶ್ವಾನ ಪ್ರಿಯರು ಸಾಕಷ್ಟು ಆತಂಕದಲ್ಲಿದ್ದರು. ಈ ಸೀರಿಯಲ್ ಡಾಗ್ ಕಿಲ್ಲರ್ ನ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು...
ಕೊನೆಗೂ 'ಸೀರಿಯಲ್ ಡಾಗ್ ಕಿಲ್ಲರ್' ಬಂಧನ
ಕೊನೆಗೂ 'ಸೀರಿಯಲ್ ಡಾಗ್ ಕಿಲ್ಲರ್' ಬಂಧನ

ನವದೆಹಲಿ: ಬೀದಿಗಳಲ್ಲಿ ಸಿಗುವ ನಾಯಿಗಳನ್ನು ಕೊಂದು ವಿಕೃತ ಆನಂದ ಅನುಭವಿಸುತ್ತಿದ್ದ 'ಸೀರಿಯಲ್ ಡಾಗ್ ಕಿಲ್ಲರ್'ನಿಂದಾಗಿ ದೆಹಲಿಯ ಶ್ವಾನ ಪ್ರಿಯರು ಸಾಕಷ್ಟು ಆತಂಕದಲ್ಲಿದ್ದರು. ಈ ಸೀರಿಯಲ್ ಡಾಗ್ ಕಿಲ್ಲರ್ ನ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು.

ಇದೀಗ ಈ ಸೀರಿಯಲ್ ಡಾಗ್ ಕಿಲ್ಲರ್ ಯಾರೆಂಬುದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದು ಆತನನ್ನು ಬಂಧನಕ್ಕೊಳಪಡಿಸಿದ್ದಾರೆ.

ಇಷ್ಟಕ್ಕೂ ಯಾರಿದು ಈ ಸೀರಿಯಲ್ ಡಾಗ್ ಕಿಲ್ಲರ್...!
ದೆಹಲಿಯ ಮೂಲದ 28 ವರ್ಷದ ನಕುಲ್ ಮಿಶ್ರಾ ಎಂಬ ವ್ಯಕ್ತಿಯೇ ಸೀರಿಯಲ್ ಡಾಗ್ ಕಿಲ್ಲರ್ ಆಗಿದ್ದು, ಈತ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಪದವಿಯನ್ನು ಪಡೆದಿದ್ದಾನೆ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಕುಲ್ ನ್ನು ಸಂಸ್ಥೆ ಕೆಲವು ತಿಂಗಳ ಹಿಂದಷ್ಟೇ ಕೆಲಸದಿಂದ ತೆಗೆದುಹಾಕಿತ್ತು. ಇದಾದ ಕೆಲವೇ ದಿನಗಳಲ್ಲಿ ಆತನ ಪ್ರೀತಿ ಕೈಕೊಟ್ಟಿತ್ತು.

ನಂತರ ನಕುಲ್ ಹೆಚ್ಚಾಗಿ ಪ್ರೀತಿಸುತ್ತಿದ್ದ ನಾಯಿಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿತ್ತು. ಈ ಎಲ್ಲಾ ನೋವಿನಿಂದಾಗಿ ನಕುಲ್ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದಾನೆ. ಇದರ ಪರಿಣಾಮ ತನ್ನ ಕೋಪವನ್ನು ಬೀದಿ ನಾಯಿಗಳ ಮೇಲೆ ಬಿಟ್ಟಿದ್ದಾನೆಂದು ತಿಳಿದುಬಂದಿದೆ.

ದೆಹಲಿಯಲ್ಲಿ ಸೀರಿಯಲ್ ಡಾಗ್ ಕಿಲ್ಲರ್ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. ಅಲ್ಲದೆ, ಈ ಕಿಲ್ಲರ್ ನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಡಾಗ್ ಕಿಲ್ಲರ್ ನ್ನು ಹುಡುಕಿ ಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡುವುದಾಗಿಯೂ ಎನ್ ಜಿ ಒ ಸಂಸ್ಥೆಯೊಂದು ಘೋಷಣೆ ಮಾಡಿತ್ತು.

ಸೀರಿಯಲ್ ಡಾಗ್ ಕಿಲ್ಲರ್ ನ್ನು ಹುಡುಕುವ ಸಲುವಾಗಿ ಹೌಜ್ ಖಾಸ್ ಉಪವಿಭಾಗದ ಪೊಲೀಸರು ಪ್ರತೀಯೊಂದು ಮನೆಯನ್ನು ತಪಾಸಣೆ ಮಾಡಲು ಆರಂಭಿಸಿದ್ದರು. ಇದರಂತೆ ನಕುಲ್ ಮಿಶ್ರಾ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ನಕುಲ್ ದಕ್ಷಿಣ ದೆಹಲಿಯ ಯೂಸುಫ್ ಸರೈ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಜೀವನ ನಡೆಸುತ್ತಿದ್ದ.

ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಂತೆ ನಕುಲ್ ಮನೆಬಿಟ್ಟು ಮಯೂರ್ ವಿಹಾರದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಾನೆ. ನಂತರ ಅಲ್ಲಿ ಮೂರುಗಳ ಕಾಲವಿದ್ದು, ಲಖನೌಗೆ ಹೋಗಿದ್ದಾನೆ. ಈ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಇದೀಗ ನಕುಲ್ ಮಿಶ್ರಾನನ್ನು ಇದೀಗ ಬಂಧನಕ್ಕೊಳಪಡಿಸಿದ್ದಾರೆ.

ಇನ್ನು ನಕುಲ್ ವರ್ತನೆಯನ್ನು ಪರಿಶೀಲಿಸಿರುವ ಏಮ್ಸ್ ಮನೋವೈದ್ಯಶಾಸ್ತ್ರದ ಇಲಾಖೆಯು ಆತಂಕ ವ್ಯಕ್ತಪಡಿಸಿದ್ದು, ಡಾಗ್ ಕಿಲ್ಲರ್ ನಡವಳಿಕೆ ತೀರಾ ಗಂಭೀರದ ನಡವಳಿಕೆಯಾಗಿದ್ದು, ಇದು ಒಂದು ರೀತಿಯ ಭಯೋತ್ಪಾದಕನ ನಡವಳಿಕೆಯಂತಿದೆ.

ನಕುಲ್ ವರ್ತನೆ ಸಾಮಾನ್ಯವಾಗಿ ಖಿನ್ನತೆಗೊಳಗಾಗುವ ವ್ಯಕ್ತಿಯ ನಡವಳಿಕೆಯಂತಿಲ್ಲ. ತನ್ನ ಸಾಕುನಾಯಿಯನ್ನು ಕಳೆದುಕೊಂಡ ದುಃಖದಲ್ಲಿ ನಕುಲ್ ಉಗ್ರನಂತೆ ವರ್ತಿಸುತ್ತಿದ್ದಾನೆ. ಪ್ರಾಣಿಗಳನ್ನು ಕೊಲ್ಲುವ ಮೂಲಕ ತನ್ನ ದ್ವೇಷವನ್ನು ತೀರಿಸಿಕೊಳ್ಳುತ್ತಿದ್ದಾನೆಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com