

ವಾಷಿಂಗ್ಟನ್: ಜೂನ್ 7 ಹಾಗೂ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ ಎಂದು ನಾಲ್ವರು ಉಭಯಪಕ್ಷದ ನಾಲ್ವರು ಅಮೆರಿಕ ಶಾಸಕರು ಹೇಳಿದ್ದಾರೆ.
ಈ ವೇಳೆ ಮೋದಿ ಅವರನ್ನು ಕಾಂಗ್ರೆಸ್ ನ ಜಂಟಿ ಸಭೆಗೆ ಆಹ್ವಾನಿಸುವ ಕುರಿತು ಸ್ಪೀಕರ್ ಪೌಲ್ ರಾಯನ್ ಅವರನ್ನು ಶಾಸಕರು ಕೇಳಿದ್ದಾರೆ.
ಇದೇ ಜೂನ್ 7ರಂದು ಪ್ರಧಾನಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಮೆರಿಕದ ಕಾಂಗ್ರೆಸ್ ಶಾಸಕರಾದ ರಾಯ್ಸಿ, ಎಲಿಯಟ್ ಏಂಜಲ್, ಜಾರ್ಜ್ ಹೋಲ್ಡಿಂಗ್ ಮತ್ತು ಅಮಿ ಬೇರಾ ರಯಾನ್ ಗೆ ಪತ್ರ ಮುಖೇನ ತಿಳಿಸಿದ್ದಾರೆ.
ಮೋದಿ ಪ್ರವಾಸದ ಕುರಿತು ವೈಟ್ ಹೌಸ್ ಅಥವಾ ಪ್ರಧಾನಮಂತ್ರಿ ಸಚಿವಾಲಯ ಅಧಿಕೃತ ಘೋಷಣೆ ಮಾಡಬೇಕಿದೆ.