

ಬಾಗಲಕೋಟೆ: ರಾಜ್ಯದಲ್ಲಿ ಬರಗಾಲದ ತೀವ್ರತೆ ಹೆಚ್ಚುತ್ತಿದ್ದು, ಉತ್ತರ ಕರ್ನಾಟದ ಜಿಲ್ಲೆಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಬಾಗಲಕೋಟೆಯಲ್ಲಿ ರೈತರು ಕಾಲುವೆಗಳಿಂದ ನೀರನ್ನು ಕದಿಯುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಳೆದ ಒಂದು ವಾರದಲ್ಲಿ ನೀರನ್ನು ಮೇಲೆತ್ತಲು ಬಳಸುತ್ತಿದ್ದ 4 ಡೀಸೆಲ್ ಪಂಪ್ ಸೆಟ್ ಗಳನ್ನು ಬಾಗಲಕೋಟೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೀರನ್ನು ಕದೀಯುವುದನ್ನು ತಡೆಗಟ್ಟಲು ಅಧಿಕಾರಿಗಳು ಕ್ರಮ ಕೈಗೊಂಡರು ಸಹ ಮುಧೋಳದಲ್ಲಿ ರೈತರು ನೀರನ್ನು ಕದಿಯುತ್ತಿರುವ ಪ್ರಕರಣಂಗಳು ಬೆಳಕಿಗೆ ಬಂದಿವೆ.
ಬಾಗಲಕೋಟೆ ಜಿಲ್ಲಾಡಳಿತ ಹಿಡಕಲ್ ಅಣೆಕಟ್ಟಿನಿಂದ 108 ಟಿಎಂಸಿ ನೀರನ್ನು ಪಡೆದಿದೆ. ಹಿಡಕಲ್ ಅಣೆಕಟ್ಟಿನಿಂದ ಬಿಡುಗಡೆ ಮಾಡಿದ್ದ ನೀರು ಕನಿಷ್ಟ 15 ಕಾಲುವೆಗಳನ್ನು ತುಂಬಿತ್ತು. ನೀರಿನ ಅಭಾವ ಎದುರಿಸುತ್ತಿರುವ ರೈತರು, ಕಾಲುವೆಗಳಿಂದ ಮಿತಿಮೀರಿದ ಪ್ರಮಾಣದಲ್ಲಿ ನೀರನ್ನು ಕಡಿಯುತ್ತಿದ್ದು ಕಬ್ಬು ಬೆಳೆಗಳಿಗೆ ಹಾಯಿಸುತ್ತಿದ್ದಾರೆ. ರಾತ್ರಿ ವೇಳೆ ಪಂಪ್ ಸೆಟ್ ಗಳ ಮೂಲಕ ನೀರನ್ನು ಕದಿಯಲಾಗುತ್ತಿದ್ದು ಇದಕ್ಕೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಬಾಗಲಕೋಟೆ ಡಿಸಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.